LATEST NEWS
ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದ ಊಟ – ಸಮರ್ಥಿಸಿದ ದೇವಸ್ಥಾನ ಆಡಳಿತ ಮಂಡಳಿ
ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದ ಊಟ – ಸಮರ್ಥಿಸಿದ ದೇವಸ್ಥಾನ ಆಡಳಿತ ಮಂಡಳಿ
ಉಡುಪಿ ಜನವರಿ 9: ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಊಟ ನೀಡಿರುವ ವಿವಾದದ ಬಗ್ಗೆ ಕೊಲ್ಲೂರು ಆಡಳಿತ ಮಂಡಳಿ ಲಿಖಿತ ಮಾಹಿತಿ ಬಿಡುಗಡೆ ಮಾಡಿದೆ.
ಈ ಮಾಹಿತಿ ಅನ್ವಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಒಂದು ಲಕ್ಷ ಹಣವನ್ನು ದೇವಸ್ಥಾನಕ್ಕೆ ಪಾವತಿ ಮಾಡಿದ್ದಾರೆ ಎಂದು ತಿಳಿಸಿದೆ. ಅಧ್ಯಕ್ಷ ಹರೀಶ್ ಉಪ್ಪುಂದರಿಂದ ಹಣ ಪಾವತಿ, ಊಟದ ವೆಚ್ಚ ತಗಲುವ ವೆಚ್ಚ ದೇವಸ್ಥಾನಕ್ಕೆ ಪಾವತಿ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ಸರ್ಕಾರಿ ದೇವಸ್ಥಾನದ ಊಟ ಕೊಡುವ ಅವಕಾಶವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿನ್ನೆ ಬೈಂದೂರಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಕೊಲ್ಲೂರಿಂದ ಊಟ ಕೊಡಲಾಗಿತ್ತು, ಈ ವಿಚಾರಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿ, ದೇವಸ್ಥಾನದ ನಡೆದೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಈ ಲಿಖಿತ ಹೇಳಿಕೆ ಬಿಡುಗಡೆ ಮಾಡಿದೆ.
You must be logged in to post a comment Login