Connect with us

    LATEST NEWS

    ಮಂಗಳೂರು – ಕಾರುಗಳ ಮೇಲೆ ಬಿದ್ದ ಬೃಹತ್ ಗಾತ್ರದ ಕಟೌಟ್

    ಮಂಗಳೂರು ಎಪ್ರಿಲ್ 26: ಮಂಗಳೂರಿನ ಟೌನ್ ಹಾಲ್ ಎದುರು ಹಾಕಲಾಗಿದ್ದ ಬೃಹತ್ ಗಾತ್ರದ ಕಟೌಟ್ ಒಂದು ಕಾರಿನ ಮೇಲೆ ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡ ಘಟನೆ ನಡೆದಿದೆ.


    ಎಪ್ರಿಲ್ 27ರಿಂದ 30 ರವರೆಗೆ ಮಂಗಳೂರು ಟೌನ್‌ ಹಾಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್‌ ಬಳಿ ಅಳವಡಿಸಿದ್ದ ಬೃಹತ್‌ ಗಾತ್ರದ ಕಟೌಟ್‌ ಅಳವಡಿಸಲಾಗಿತ್ತು. ಆದರೆ ಗಾಳಿಗೆ ಹಾರಿ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿದ್ದ ಎರಡು ಕಾರುಗಳ ಮೇಲೆ ಬಿದ್ದಿದೆ.

    ಅದೃಷ್ಟವಶಾತ್‌ ಪಾರ್ಕ್‌ ಮಾಡಿದ ಕಾರಿನಲ್ಲಿ ಯಾರೂ ಇರಲಿಲ್ಲ. ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಕಟೌಟ್‌ ಅಡಿ ಇದ್ದ ವಾಹನ ತೆರವುಗೊಳಿಸಿದ್ದಾರೆ. ಕಟೌಟ್‌ ಬಿದ್ದ ಪರಿಣಾಮ ಕೆಲಕಾಲ ಕ್ಲಾಕ್‌ ಟವರ್‌ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು.

    Share Information
    Advertisement
    Click to comment

    You must be logged in to post a comment Login

    Leave a Reply