Connect with us

    LATEST NEWS

    ಮತದಾನ ಮಹತ್ವ ತಿಳಿಸಲು ಸಿಟಿಸೆಂಟರ್ ನಲ್ಲಿ ಕಾಲೇಜ್ ವಿಧ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್

    ಮತದಾನ ಮಹತ್ವ ತಿಳಿಸಲು ಸಿಟಿಸೆಂಟರ್ ನಲ್ಲಿ ಕಾಲೇಜ್ ವಿಧ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್

    ಮಂಗಳೂರು ಮಾರ್ಚ್ 31 : ಜಿಲ್ಲಾ ಸ್ವೀಪ್ ಸಮಿತಿಯು ಮತದಾರರನ್ನು ಮತದಾನ ಕೇಂದ್ರದತ್ತ ಸೆಳೆಯಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದು, ಯುವ ಮತದಾರರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ ತಿಳಿಸಲು ಮಾರ್ಚ್ 30 ರಂದು ಸಂಜೆ ನಗರದ ಸಿಟಿ ಸೆಂಟರ್‍ನಲ್ಲಿ ’ಫ್ಲಾಶ್ ಮಾಬ್’ ಕಾರ್ಯಕ್ರಮ ಆಯೋಜಿಸಲಾಯಿತು.

    ನಮ್ಮಲ್ಲಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ತಮ್ಮ ಹಕ್ಕು ಹಾಗೂ ಮತದಾನದ ಕರ್ತವ್ಯವನ್ನು ಚಲಾಯಿಸಲು ಹುರಿದುಂಬಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಸಿಇಒ ಡಾ ಸೆಲ್ವಮಣಿ ಆರ್ ಅವರು, ಯುವಕರು ಯಾವುದೇ ಕಾರಣಕ್ಕೂ ಎಪ್ರಿಲ್ 18 ರಂದು ನಡೆಯಲಿರುವ ಮತದಾನದಿಂದ ಹೊರಗುಳಿಯಬಾರದು ಎಂಬ ಸಂದೇಶವನ್ನು ನೀಡಿದರು.

    ಅತ್ಯಾಕರ್ಷಕವಾಗಿ ಮೂಡಿಬಂದ ಕಾರ್ಯಕ್ರಮ ಸಿಟಿ ಸೆಂಟರ್‍ಗೆ ಬಂದ ಗ್ರಾಹಕರನ್ನು ಎಲ್ಲರನ್ನು ಆಕರ್ಷಿಸಿತು. ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಸಹಕಾರದೊಂದಿಗೆ ಶ್ರೀನಿವಾಸ ಫಿಸಿಯೋಥೆರಪಿ ವಿದ್ಯಾರ್ಥಿಗಳು ಸ್ಮರಣೀಯವಾಗಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಅಜಯ್, ರಿಜಿಸ್ಟ್ರ್ರಾರ್ ಡೆವಲಪ್‍ಮೆಂಟ್ ಡಾ. ರಾಜಶೇಖರ್, ಡಾ. ತೃಶಾಲ್, ಮಹಾನಗರಪಾಲಿಕೆಯ ಅಧಿಕಾರಿಗಳು ಮುಂತಾದವರು ಪಾಲ್ಗೊಂಡರು.

    Share Information
    Advertisement
    Click to comment

    You must be logged in to post a comment Login

    Leave a Reply