Connect with us

MANGALORE

ಕೊರೊನಾ ಸಂಕಷ್ಟ – ಮೀನುಗಾರಿಕಾ ಋುತು ಆರಂಭ ಒಂದು ತಿಂಗಳು ಮುಂದೂಡಿಕೆ

ಮಂಗಳೂರು ಜುಲೈ 30: ಅಗಸ್ಟ್ 1 ರಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕಾ ಋತುವನ್ನು ಕೊರೊನಾದಿಂದಾಗಿ ಈ ಬಾರಿ ಕರಾವಳಿಯಲ್ಲಿ ಸೆಪ್ಟೆಂಬರ್‌ 1 ರಿಂದ ಆರಂಭಿಸಲು ಮೀನುಗಾರಿಕಾ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರತಿ ವರ್ಷದಂತೆ ಮೀನುಗಾರಿಕೆಯ ನಿಷೇಧದ ಅವಧಿ ಜುಲೈ 31 ಕ್ಕೆ ಮುಕ್ತಾಯವಾಗಿ, ಆಗಸ್ಟ್ 1ರಿಂದ ಆರಂಭವಾಗಬೇಕಾಗಿತ್ತು. ಕೊರೊನಾದ ಸಂಕಷ್ಟದಿಂದ ಮತ್ತೆ ಅಗಸ್ಟ್ 1 ರಿಂದ ಪ್ರಾರಂಭ ಕಷ್ಟ ಸಾಧ್ಯವಾದ ಹಿನ್ನಲೆ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಕುರಿತಂತೆ ವಿವಿಧ ಸಂಘಟನೆಗಳ ಸಭೆ ಕರೆದು, ಮೀನುಗಾರಿಕೆ ಪ್ರಾರಂಭಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಅನೇಕ ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೇ ಇರುವುದರಿಂದ ಸೆಪ್ಟೆಂಬರ್‌ 1 ರವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಟ್ರಾಲ್‌ ಬೋಟ್‌ ಮಾಲೀಕರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 1,200 ಮೀನುಗಾರಿಕೆ ಬೋಟ್‌ಗಳಿದ್ದು, ಶೇ 75 ರಷ್ಟು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ, ಒಡಿಶಾ ರಾಜ್ಯದವರು. ಮೀನುಗಾರಿಕೆ ಆರಂಭಿಸಲು ಈ ಕಾರ್ಮಿಕರು ಮಂಗಳೂರಿಗೆ ಬರಬೇಕಿದೆ ಎಂದು ತಿಳಿಸಿದ್ದಾರೆ.


ಅಲ್ಲದೆ ಕೊರೊನಾ ನಡುವೆ ಸುರಕ್ಷಿತ ಮೀನುಗಾರಿಕೆ ನಡೆಸಲು ಅಗತ್ಯ ಮಾರ್ಗಸೂಚಿಗಳನ್ನು ತಯಾರಿಸಬೇಕಾಗಿದೆ. ಮೀನು ವಹಿವಾಟು ಆರಂಭವಾದರೆ ಜನದಟ್ಟಣೆ ಹಾಗೂ ಸುರಕ್ಷಿತ ಅಂತರವನ್ನು ಕಾಪಾಡುವುದು ಕಷ್ಟಕರವಾಗಲಿದೆ. ಅಲ್ಲದೇ ಕೊರೊನಾ ಪ್ರಕರಣಗ ದಾಖಲಾದರೆ ಬಂದರು ಪ್ರದೇಶವನ್ನು ಸೀಲ್‌ಡೌನ್‌ ಮಾಡಬೇಕಾಗುವ ಸಂದರ್ಭ ಬರುವ ಸಾಧ್ಯತೆ ಇದ್ದು ಮೀನುಗಾರರು ಭಾರಿ ನಷ್ಟ ಅನುಭವಿಸುವ ಆತಂಕವೂ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

Facebook Comments

comments