Connect with us

LATEST NEWS

ಸಮುದ್ರ ಮಧ್ಯೆ ಮಗುಚಿದ ದೋಣಿ; ಮೀನುಗಾರರು ಸೇಫ್

ಮಂಗಳೂರು ಜುಲೈ 24: ಹವಮಾನ ಇಲಾಖೆ ಮುನ್ಸೂಚನೆ ಇದ್ದರೂ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಮಧ್ಯದಲ್ಲಿ ಮಗುಚಿಬಿದ್ದು ಅದರಲ್ಲಿದ್ದ ಆರು ಮಂದಿ ಮೀನುಗಾರರು ಯಾವುದೇ ಪ್ರಾಣಾಯಪಾಯ ಇಲ್ಲದೇ ಪಾರಾದ ಘಟನೆ ಇಂದು ನಡೆದಿದೆ. ಸಸಿಹಿತ್ಲುವಿನ 6 ಮಂದಿ ಯುವಕರು ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದರು.

ಸಾಂದರ್ಭಿಕ ಚಿತ್ರ

ಆದರೆ ಸಮುದ್ರ ಮಧ್ಯೆ ಹವಾಮಾನ ವೈಪರಿತ್ಯದ ಕಾರಣದಿಂದ ದೋಣಿಯು ಮಗುಚಿ ಬಿದ್ದಿದೆ. ಇದರಲ್ಲಿದ್ದ ಮೂರು ಮಂದಿ ಈಜಿಕೊಂಡು ದಡ ಸೇರಿದ್ದು, ಇನ್ನಿಬ್ಬರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಗಿದೆ. ಉಳಿದ ಒರ್ವ ಮೀನುಗಾರ ಉತ್ತರ ದಿಕ್ಕಿನಲ್ಲಿ ಸಾಗುತ್ತಿದ್ದ ದೋಣಿಯವರೆಗೆ ಈಜಿಕೊಂಡು ಸಾಗಿ ಸ್ವಯಂ ರಕ್ಷಣೆಗೊಳಗಾಗಿದ್ದಾರೆ. ಅವರು ಆ ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಸೇರಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.