ಮಹಾರಾಷ್ಟ್ರದಲ್ಲಿ ಮಲ್ಪೆ ಮೀನುಗಾರಿಕಾ ಬೋಟ್ ಅವಘಡ – 7 ಮಂದಿ ಮೀನುಗಾರರ ರಕ್ಷಣೆ

ಉಡುಪಿ ಎಪ್ರಿಲ್ 9: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟು ಒಂದು ಮಹಾರಾಷ್ಟ್ರದ ದೇವಗಡದಲ್ಲಿ ಅವಘಡಕ್ಕೀಡಾಗಿದೆ. ಅಪಾಯಕ್ಕೆ ಸಿಲುಕ್ಕಿದ್ದ ಎಲ್ಲಾ 7 ಜನ ಮೀನುಗಾರರನ್ನುರಕ್ಷಿಸಲಾಗಿದೆ.

ಮತ್ತೆ ಮಲ್ಪೆಯಿಂದ ಹೋರಟ ಆಳಸಮುದ್ರ ಮೀನುಗಾರಿಕಾ ಬೋಟೊಂದು ಮಹಾರಾಷ್ಟ್ರದ ದೇವಗಡದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿದೆ. ದಿನೇಶ್ ತಿಂಗಳಾಯ ಅವರಿಗೆ ಸೇರಿದ ಶಿವರಕ್ಷಾ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದೆ.

ಈ ಅವಘಡದಲ್ಲಿ ಬೋಟಿನ ಅಡಿಭಾಗಕ್ಕೆ ಹಾನಿಯಾಗಿ ನೀರು ಒಳನುಗ್ಗಿ ಬೋಟ್ ಮುಳುಗಡೆಯಾಗಿದೆ. ಸ್ಥಳೀಯ ಇತರ ಮೀನುಗಾರಿಕಾ ಬೋಟ್ ಗಳ ಸಹಾಯದಿಂದ ಬೋಟ್ ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಅವಘಡಕ್ಕೀಡಾದ ಬೋಟ್ ನಲ್ಲಿ 7 ಜನ ಮೀನುಗಾರರು ಭಟ್ಕಳಕ್ಕೆ ಸೇರಿದವರಾಗಿದ್ದು, ಸುನಿಲ್ ಮಂಜುನಾಥ, ಸುರೇಶ್ ಮಂಜುನಾಥ್, ಜಗನ್ನಾಥ ರಾಮ, ಪ್ರಶಾಂತ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್ ಧರ್ಮ ಎಂದು ಗುರುತಿಸಲಾಗಿದೆ.

ಈ ಅವಘಡದಲ್ಲಿ ಅಂದಾಜು 90 ಲಕ್ಷ ರುಪಾಯಿ ನಷ್ಟ ಸಂಭವಸಿದೆ ಎಂದು ಹೇಳಲಾಗಿದ್ದು, ಎಂಟು ಸಾವಿರ ಲೀಟರ್ ಡೀಸೆಲ್ , ಬಲೆ, ಜಿಪಿಎಸ್, ಹಿಡಿದ ಮೀನುಗಳು ಮುಳುಗಡೆಯಾಗಿವೆ.