Connect with us

LATEST NEWS

ಉಡುಪಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ – ಈಜಿ ದಡ ಸೇರಿದ ಮೀನುಗಾರರು

ಉಡುಪಿ ಅಗಸ್ಟ್ 24: ಕುಂದಾಪುರ ಕೊಡೇರಿ ಮೀನುಗಾರಿಕಾ ದೋಣಿ ದುರಂತ ಮಾಸುವ ಮುನ್ನವೇ, ಉಡುಪಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಅವಘಡ ಸಂಭವಿಸಿದೆ. ಆಳ ಸಮುದ್ರ ಮೀನುಗಾರಿಕಾ ಬೋಟ್ ಬಂಡೆಯೊಂದಕ್ಕೆ ಡಿಕ್ಕಿಯಾಗಿ ಸಂಪೂರ್ಣ ಹಾನಿಯಾಗಿದ್ದು, ಬೋಟ್ ಮುಳುಗಡೆ ಯಾಗುತ್ತಿದ್ದಂತೆ ಬೋಟ್ ನಲ್ಲಿದ್ದ ಮೀನುಗಾರರು ಈಜಿ ದಡ ಸೇರಿದ್ದಾರೆ.


ಉದ್ಯಾವರದ ಗಿರೀಶ ಸುವರ್ಣ ಎಂಬವರ ಮಾಲಕತ್ವದ ಬೋಟ್ ಬಾಹುಬಲಿ ಹೆಸರಿನ ಆಳ ಸಮುದ್ರ ಮೀನುಗಾರಿಕಾ ಬೋಟ್ ಇದಾಗಿದ್ದು, ದಡದಿಂದ ಮೂರು ನಾಟಿಕಲ್ ದೂರದಲ್ಲಿ ಬಂಡೆಯೊಂದಕ್ಕೆ ಡಿಕ್ಕಿಯಾಗಿದೆ.


ಬಂಡೆಗೆ ಡಿಕ್ಕಿಯಾದ ಬೋಟ್ ಮುಳುಗಡೆಯಾಗುತ್ತಿದ್ದಂತೆ ಬೋಟ್ ನಲ್ಲಿದ್ದ 7 ಜನ ಮೀನುಗಾರರು ಸಮುದ್ರಕ್ಕೆ ಜಿಗಿದು ಈಜಿ ದಡ ಸೇರಿದ್ದಾರೆ.ಈ ಅವಘಡದಿಂದ 80 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಸದ್ಯ ಬೇರೆ ಮೀನುಗಾರಿಕಾ ಬೋಟ್ ಬಳಸಿ ಬೋಟ್ ಮೇಲಕ್ಕೆ ಎಳೆಯುವ ಪ್ರಯತ್ನ ನಡೆಸಲಾಗುತ್ತಿದೆ.

Facebook Comments

comments