ಮೀನು ವ್ಯಾಪಾರಿ ದರೋಡೆ ಪ್ರಕರಣ : 7 ಜನ ಆರೋಪಿಗಳ ಬಂಧನ

ಮಂಗಳೂರು, ಫೆಬ್ರವರಿ 07 : ಮೀನು ವ್ಯಾಪಾರಿಯನ್ನು ದರೋಡೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಮಂಗಳೂರಿನ ಕಂಕನಾಡಿ ನಗರ ಠಾಣೆಯ ಪೊಲಿಸರು ಬಂಧಿಸಿದ್ದಾರೆ. ನಗರದ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ದಿನಾಂಕ ಕಳೆದ ಫೆಬ್ರವರಿ 5 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಮಂಗಳೂರಿಗೆ ಮೀನಿನ ವ್ಯಾಪಾರಕ್ಕಾಗಿ ಬಂದಿದ್ದ ಅಸೀಫ್‌ ಮಹಮ್ಮದ್‌ ನಕ್ವಾನನ್ನು ಅಡ್ಡಗಟ್ಟಿದ ದರೋಡೆಕೋರರು 5 ಲಕ್ಷ ರೂಪಾಯಿ ಹಣವನ್ನು ದೋಚಿ ಕಾರಲ್ಲಿ ಪರಾರಿಯಾಗಿದ್ದರು.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಭಟ್ಕಳದ ಏಳು ಜನ ಆರೋಪಿಗಳಾದ ಮಹಮ್ಮದ್ ಸಬೀರ್‌,ಮಹಮ್ಮದ್‌ ನವೀದ್‌ ,ಖ್ವಾಜಾ ಸಾಬ್‌ ,ಮಹಮ್ಮದ್ ನಬೀಲ್ ಸಾಬ್‌ ,ಸಯ್ಯದ್ ಫಯಾಜ್ ,ಸಯ್ಯದ್ ಹುಸೇನ್ ಹಾಗೂ ನಾಸೀರ್ ಶೇಕ್‌ನನ್ನು ಪೊಲಿಸರು ಬಂಧಿಸಿದ್ದಾರೆ.

ಇವರು ಕೃತ್ಯಕ್ಕೆ ಉಪಯೋಗಿಸಿದ KA-53-B- 4418 ಟವೇರಾ ಕಾರು, 5 ಲಕ್ಷ ನಗದು, ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

2 Shares

Facebook Comments

comments