Connect with us

LATEST NEWS

ಕುಂದಾಪುರ ಕೊಡೇರಿಯಲ್ಲಿ ಮೀನುಗಾರಿಕಾ ದೋಣಿ ದುರಂತ ನಾಲ್ವರು ನಾಪತ್ತೆ

ಕುಂದಾಪುರ ಅಗಸ್ಟ್ 16: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಸಿಲುಕಿ ಪಲ್ಟಿಯಾಗಿ ನಾಲ್ವರು ಮೀನುಗಾರರು ನಾಪತ್ತೆಯಾಗಿರುವ  ಘಟನೆ ಕುಂದಾಪುರದ ಕೊಡೇರಿ ಎಂಬಲ್ಲಿ ನಡೆದಿದೆ.  ದೋಣಿಯಲ್ಲಿ ಒಟ್ಟು 11 ಮಂದಿ ಮೀನುಗಾರರು ಇದ್ದು ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ.

ಈ ಸಂದರ್ಭ ಏಳು ಮಂದಿ ಮೀನುಗಾರರು ಈಜಿ ಪಾರಾಗಿ ಬಂದಿದ್ದಾರೆ ಆದರೆ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದ್ದು, ನಾಲ್ವರಲ್ಲಿ ಇಬ್ಬರು ಮೀನು ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಮುದ್ರದ ಅಲೆಗಳು ಹೆಚ್ಚಾಗಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗುತ್ತಿದೆ.