Connect with us

    LATEST NEWS

    ಅರಬ್ಬೀ ಸಮುದ್ರದಲ್ಲಿ ಪಲ್ಟಿಯಾದ ಮೀನುಗಾರಿಕಾ ಬೋಟ್…6 ಮಂದಿ ನಾಪತ್ತೆ

    ಮಂಗಳೂರು ಡಿಸೆಂಬರ್ 1: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಗೆ ಬೋಟ್ ಮುಳುಗಡೆಯಾಗಿ 6 ಜನ ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ.


    ಪಣಂಬೂರಿನಿಂದ ಕಲೆ ನಾಟಿಕಲ್ ದೂರದಲ್ಲಿ ಬೋಳಾರದ ಶ್ರೀ ರಕ್ಷಾ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಈ ಬೋಟ್ ನಲ್ಲಿ 22 ಮಂದಿ ಮೀನುಗಾರರು ಇದ್ದರು ಎಂದು ಹೇಳಲಾಗಿದ್ದು, ಅದರಲ್ಲಿ 6 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

    ಮೀನುಗಾರಿಕೆ ಸಂದರ್ಭ ಹಿಡಿದ ಮೀನುಗಳನ್ನು ಬೋಟ್ ಗೆ ತುಂಬಿಸುವ ಸಂದರ್ಭ ದೊಡ್ಡ ಅಲೆಯ ಹೊಡೆತಕ್ಕೆ ಮೀನುಗಾರಿಕಾ ಬೋಟ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಸದ್ಯ ಮೀನುಗಾರಿಕೆಯಲ್ಲಿ ತೊಡಗಿದ್ದ ಇತರ ಮೀನುಗಾರಿಕಾ ಬೋಟ್ ಗಳು ಮೀನುಗಾರರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply