Connect with us

    LATEST NEWS

    ಮದುವೆ ಹಾಲ್ ಗೆ ಬೆಂಕಿ ಬಿದ್ದರೂ ಕೂಡ ಅತಿಥಿಗಳು ಊಟದಲ್ಲಿ busy….!!

    ಮುಂಬೈ : ಮದುವೆ ಹಾಲ್ ಗೆ ಬೆಂಕಿ ಬಿದ್ದು ಧಗಧಗ ಉರಿಯುತ್ತಿದ್ದರೂ ಮದುವೆ ಮಂಟಪದಲ್ಲಿದ್ದ ಅತಿಥಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸದೆ ಊಟ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಭಾನುವಾರ ರಾತ್ರಿ ನಡೆದ ಘಟನೆ ಇದು. ಸದ್ಯ ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಮನೆಯ ಹಿಂಭಾಗದಲ್ಲಿ ಬೆಂಕಿ ಧಗಧಗ ಉರಿಯುತ್ತಿರುವುದು ಮತ್ತು ಅದನ್ನು ಕಂಡ ಬಳಿಕವೂ ಒಂದಷ್ಟು ಅತಿಥಿಗಳು ಪರಸ್ಪರ ಮಾತನಾಡುತ್ತಲೇ ಊಟವನ್ನು ಮುಂದುವರಿಸುವುದನ್ನು ನೋಡಬಹುದಾಗಿದೆ.

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮವಹಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಈ ಎಲ್ಲಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ನೆಟ್ಟಿಗರು ಕೂಡಾ ಬಗೆಬಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply