Connect with us

DAKSHINA KANNADA

ಚಲಿಸುತ್ತಿದ್ದ ಪ್ಯಾಸೆಂಜರ್ ವಾಹನಕ್ಕೆ ಬೆಂಕಿ…ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಪುತ್ತೂರು ಫೆಬ್ರವರಿ 9: ಶಾರ್ಟ್ ಸರ್ಕ್ಯೂಟ್‌ಗೆ ಒಳಗಾಗಿ ಪ್ಯಾಸೆಂಜರ್ ವಾಹನವೊಂದು ಸಂಪೂರ್ಣ ಸುಟ್ಟುಹೋದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಶಿರಾಡಿಯಿಂದ ನೆಲ್ಯಾಡಿಗೆ ಬರುತ್ತಿದ್ದ ಈ ವಾಹನದಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸುತ್ತಿದ್ದರು.

ಮಣ್ಣಗುಂಡಿ ಸಮೀಪಿಸುತ್ತಿದ್ದಂತೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರ ಅರಿವಿಗೆ ಬರುತ್ತಿದ್ದಂತೆ ಚಾಲಕ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದು ಬೆಂಕಿಯ ಜ್ವಾಲೆ ಹೆಚ್ಚಾಗಿ ವಾಹನ ಸಂಪೂರ್ಣ ಸುಟ್ಟುಹೋಗಿದೆ. ಚಾಲಕ ಸೇರಿದಂತೆ ಮೂವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.