ಮೀನುಗಾರಿಕಾ ಬಂದರಿನಲ್ಲಿ ಬೆಂಕಿ ಅವಘಡ

ಮಂಗಳೂರು ಫೆಬ್ರವರಿ 11: ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಗರದ ಹೊಯಿಗೆ ಬಜಾರಿನಲ್ಲಿರುವ ಮೀನುಗಾರಿಕಾ ಧಕ್ಕೆಯಲ್ಲಿ ಈ ಬೆಂಕಿ ಅಕಸ್ಮಿಕ ಸಂಭವಿಸಿದ್ದು ಭಾರಿ ಪ್ರಮಾಣದಲ್ಲಿ ಮೀನು ಶೇಖರಿಸಿಡುವ ಕ್ರೇಟುಗಳು ಬೆಂಕಿಗಾಹುತಿಯಾಗಿವೆ.

ಉಸ್ಮಾನ್ ಎಂಬವರಿಗೆ ಸೇರಿದ್ದ ಈ ಕ್ರೇಟುಗಳು ಸೇರಿದ್ದಾಗಿವೆ ಎನ್ನಲಾಗಿದ್ದು, ಲಕ್ಷಾಂತರ ಮೌಲ್ಯದ ಕ್ರೇಟುಗಳು ಬೆಂಕಿಗಾಹುತಿಯಾಗಿವೆ.
ಬೆಂಕಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಅಗ್ನಿಶಾಮಕದಳದವರು ಬಂದು ಬೆಂಕಿಯನ್ನು ಆರಿಸಿದ್ದು, ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.