DAKSHINA KANNADA
ಉಪ್ಪಿನಂಗಡಿ – ಆಕಸ್ಮಿಕ ಬೆಂಕಿಗೆ ಸುಟ್ಟುಹೋದ ಸಮತಾ ಸ್ವೀಟ್ಸ್ ಮಳಿಗೆ
ಉಪ್ಪಿನಂಗಡಿ ಡಿಸೆಂಬರ್ 27: ಆಕಸ್ಮಿಕವಾಗಿ ಸ್ವಿಟ್ಸ್ ಮಳಿಗೆ ಬೆಂಕಿ ಹತ್ತಿಕೊಂಡ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯ ಸಮತಾ ಸ್ವೀಟ್ಸ್ ಮಳಿಗೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮಳಿಗೆಯ ಮಾಲಕರು ಬಂದ್ ಮಾಡಿ ಮನೆಗೆ ತೆರಳಿದ್ದರು, ತಡರಾತ್ರಿ ಮಳಿಗೆಯಿಂದ ಹೊಗೆ ಬರುತ್ತಿದ್ದು,. ಅದನ್ನು ನೋಡಿದ ಸ್ಥಳೀಯರು ಮಾಲಕರಿಗೆ ಮಾಹಿತಿ ತಿಳಿಸಿದ್ದಾರೆ.
ಕೂಡಲೇ ಬಂದು ಬಾಗಿಲು ತೆಗೆದಾಗ ಬೆಂಕಿ ಹೊತ್ತಿಕೊಂಡು ಮಹಿಳೆ ಸಂಪೂರ್ಣ ಭಸ್ಮವಾಗಿತ್ತು, ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸಪಟ್ಟರು, ಬಳಿಕ ಬೆಳ್ತಂಗಡಿ ಹಾಗೂ ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದವು. ಮಳಿಗೆಯಲ್ಲಿದ್ದ ಫ್ರಿಡ್ಜ್ , ಕಪಾಟುಗಳು, ಸಿಹಿತಿಂಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.