ಉಪ್ಪಿನಂಗಡಿ ಸೆಪ್ಟೆಂಬರ್ 08: ಪೆರ್ನೆಯಲ್ಲಿ ದನ ಕದ್ದು ಮಾಂಸ ಮಾಡಿದ ಘಟನೆ ವಿರೋಧಿಸಿ ಸೆಪ್ಟೆಂಬರ್ 6 ರಂದು ನಡೆದಿದ್ದ ಪ್ರತಿಭಚನೆಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿಂದೂ ಸಂಘಟನೆ ಮುಖಂಡ ಗಣರಾಜ್ ಭಟ್ ಕೆದಿಲ ಅವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಡಂಬು ಕಾರ್ಲ ರಾಮಧ್ವಾರದ ಬಳಿ ʼʼಗೋ ಮಾತಾ ಸಂರಕ್ಷಣಾ ಚಳುವಳಿ ಪೆರ್ನೆ” ಇದರ ವತಿಯಿಂದ ಗೋ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ವೇಳೆ ಗಣರಾಜ್ ಭಟ್ ಕೆದಿಲ ಎಂಬವರು ಸ್ಥಳೀಯವಾಗಿ ಧಾರ್ಮಿಕ, ಸಮುದಾಯಿಕವಾಗಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಗುಂಪು ಗುಂಪುಗಳ, ಸಮುದಾಯಗಳ ಮಧ್ಯೆ ವೈಮನಸ್ಸು ಬೆಳೆಸುವಂತೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 78/2025 ಕಲಂ: 353 (2)BNS 2023 ಯಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.



