Connect with us

LATEST NEWS

ಬಿಲ್ಲವ ಸಮುದಾಯದ ಅವಹೇಳನ – ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ದ ಎಫ್ಐಆರ್

ಮಂಗಳೂರು ಫೆಬ್ರವರಿ 9: ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಕೋಟಿ ಚೆನ್ನಯ್ಯ ಹಾಗೂ ಬಿಲ್ಲವ ಸಮುದಾದ ವಿರುದ್ದ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ದ ಈಗ ಬಿಲ್ಲವ ಸಮುದಾಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಎಫ್ಐಆರ್ ದಾಖಲಿಸಲಾಗಿದೆ.


ಧಾರ್ಮಿಕ ಕಾರ್ಯಕ್ರಮವರೊಂದರಲ್ಲಿ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿಯವರ ವಿರುದ್ದ ಹೇಳಿಕೆ ನೀಡಿದ್ದ ಜಗದೀಶ್ ಅಧಿಕಾರಿ, ನಂತ ಪೊನ್ ಕಾಲ್ ಸಂಭಾಷಣೆಯೊಂದರಲ್ಲಿ ಕೋಟಿ ಚೆನ್ನಯ್ಯ ಹಾಗೂ ಬಿಲ್ಲವ ಸಮುದಾಯದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಜಗದೀಶ್ ಅಧಿಕಾರಿ ಹೇಳಿಕೆ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ನಡುವೆ ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ರಾಜು ಪಿಕೆ ಮತ್ತು ಇತರ ಬಿಲ್ಲವ ಮುಖಂಡರು ಫೆಬ್ರವರಿ 5 ಶುಕ್ರವಾರ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಜಗದೀಶ್ ಅಧಿಕಾರಿ ವಿರುದ್ಧ ಐಪಿಸಿ 295(ಎ) ಮತ್ತು 505 ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮಾಜಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರು ಬಿಜೆಪಿ ನಾಯಕ ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಜಗದೀಶ್ ಅಧಿಕಾರಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.