LATEST NEWS
ಆರ್ಥಿಕ ಮುಗ್ಗಟ್ಟಿಗೆ ಯವ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಲಾಕ್ ಡೌನ್ ನಿಂದಾಗಿ ಉಂಟಾದ ಆರ್ಥಿಕ ಮುಗ್ಗಟ್ಟಿಗೆ ಬೇಸತ್ತು ಮಂಗಳೂರಿನಲ್ಲಿ ಯುವ ಉದ್ಯಮಿಯೊಬ್ಬರು ನೇಣಿ ಶರಣಾಗಿದ್ದಾರೆ.
ಮೃತ ಉದ್ಯಮಿಯನ್ನು ಚಂದ್ರಶೇಖರ್ ಶೆಟ್ಟಿ (38) ಎಂದು ಗುರುತಿಸಲಾಗಿದ್ದು ಇವರು ಮಂಗಳೂರಿನ ಗುರುಪುರದ ನಿವಾಸಿಯಾಗಿರುವ ಚಂದ್ರಶೇಖರ್ ಅವರು ಫ್ಲೆಕ್ಸ್ ಉದ್ಯಮ ನಡೆಸುತ್ತಿದ್ದ ಇವರು ಮಂಗಳೂರಿನ ಹಂಪನಕಟ್ಟೆಯಲ್ಲಿ ಕಚೇರಿ ಹೊಂದಿದ್ದಾರೆ. ಇದೇ ಕಚೇರಿಯಲ್ಲಿ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭ ಸ್ಥಳೀಯ ಅಂಗಡಿಯವರು ಇವರ ಕಚೇರಿಗೆ ಆಗಮಿಸಿದ್ದು, ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿ ಬಂದರು ಠಾಣೆ ಪೊಲೀಸರು ಮೃತ ಚಂದ್ರಶೇಖರ ಶೆಟ್ಟಿ ವ್ಯವಹಾರದಲ್ಲಿ ಪಾಲುದಾರರರಾಗಿದ್ದ ಆರೋಪಿ ಗುರುರಾಜ್ ಎಂಬಾತನನ್ನು ಬಂಧಿಸಿದ್ದಾರೆ.