Connect with us

    DAKSHINA KANNADA

    ಪಂಚಭೂತಗಳಲ್ಲಿ ಲೀನರಾದ ‘ಮನೋಹರ ಪ್ರಸಾದ’, ಪತ್ರಕರ್ತ, ರಾಜಕರಣಿ, ಗಣ್ಯರಿಂದ ಅಂತಿಮ ದರ್ಶನ..!

    ಮಂಗಳೂರು : ಶುಕ್ರವಾರ ಮುಂಜಾನೆ ನಿಧನರಾಗಿದ್ದ ಕರಾವಳಿಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರ ಅಂತ್ಯಕ್ರೀಯೆ ಸಾಯಂಕಲ ನಗರದ ಕದ್ರಿ ಚಿತಾಗಾರದಲ್ಲಿ ನಡೆಯಿತು.

    ಅನಾರೋಗ್ಯದಿಂದ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಮನೋಹರ್ ಪ್ರಸಾದ್ ಪಾರ್ಥಿವ ಶರೀರವನ್ನು ಬಳಿಕ ಕದ್ರಿ ಲೋಬೋ ಲೈನ್‌ನಲ್ಲಿರುವ ಅವರ ಮನೆಗೆ ತಂದು ಕುಟುಂಬಸ್ಥರಿಂದ ಧಾರ್ಮಿಕ ವಿಧಿವಿಧಾನ ಮುಗಿದ ಬಳಿಕ ಮಂಗಳೂರು ಪತ್ರಿಕಾ ಭವನಕ್ಕೆ ತರಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತ ಸಂಘ ಹಾಗೂ ಪ್ರೆಸ್‌ಕ್ಲಬ್‌ ಮತ್ತು ಪತ್ರಿಕಾ ಭವನ ಟ್ರಸ್ಟ್‌ ವತಿಯಿಂದ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್‌, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ,   ಐವನ್ ಡಿಸೋಜ, ಮೊಹಿದ್ದೀನ್ ಭಾವ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ.ಮೋಹನ್ ಆಳ್ವಾ , ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ, ಪಾಲಿಕೆ ಸದಸ್ಯರು, ಪತ್ರಿಕಾ ಹಾಗೂ ದೃಶ್ಯ ಮಾದ್ಯಮದ ಮಿತ್ರರು ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು. ಬಳಿಕ ಕದ್ರಿ ಚಿತಾಗಾರದಲ್ಲಿ ಸಂಪ್ರದಾಯದಂತೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು.


    ಬಿಜೆಪಿ ದಕ್ಷಿಣಕನ್ನಡ ಜಿಲ್ಲಾ ಸಮಿತಿಯಿಂದ ಸಂತಾಪ.
    ನಾಲ್ಕು ದಶಕಗಳ ಸುದೀರ್ಘ ಅನುಭವದೊಂದಿಗೆ ಕರಾವಳಿಯ ಪತ್ರಿಕೋದ್ಯಮದ ಧ್ವನಿಯಾಗಿದ್ದ ಹಿರಿಯ ಪತ್ರಕರ್ತರು, ಸಾಮಾಜಿಕ ಮತ್ತು ರಾಜಕೀಯ ಅಧ್ಯಯನಕ್ಕೆ‌ ಅಮೂಲ್ಯವಾದ ಕೊಡುಗೆ ನೀಡಿದ ಸಂಶೋಧನಕಾರ, ಕರಾವಳಿಯ ಹೆಮ್ಮೆಯ ಶ್ರೀ ಮನೋಹರ್ ಪ್ರಸಾದ್ ಇನ್ನಿಲ್ಲ ಅನ್ನುವ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ.
    ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಅವರ ಅಪಾರ ಮಿತ್ರವರ್ಗ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಕುಂಪಲ, ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್,
    ಮ.ನ.ಪಾ. ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಹರೀಶ್ ಪೂಂಜಾ, ಶ್ರೀ ರಾಜೇಶ್ ನಾಯ್ಕ್, ಕು. ಭಾಗೀರಥಿ ಮರುಳ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶ್ರೀನಿವಾಸ ಪೂಜಾರಿ, ಶ್ರೀ ಪ್ರತಾಪಸಿಂಹ ನಾಯಕ್ ಹಾಗೂ ಇನ್ನಿತರ ಬಿಜೆಪಿ ಹಿರಿಯರು ಮುಖಂಡರು ಸಂತಾಪವನ್ನು ಸೂಚಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *