ಸುರತ್ಕಲ್ ಬಾರ್ ನಲ್ಲಿ ಗಳೆಯರ ಗಲಾಟೆ ಕೊಲೆಯಲ್ಲಿ ಅಂತ್ಯ

ಸುರತ್ಕಲ್ ನವೆಂಬರ್ 30: ಸುರತ್ಕಲ್ ನ ಖಾಸಗಿ ಬಾರ್ ನಲ್ಲಿ ಗೆಳೆಯರ ನಡುವಿನ ಮಾರಾಮಾರಿಯಲ್ಲಿ ಓರ್ವ ಕೊಲೆಯಾಗಿ ಮತ್ತೊಬ್ಬನಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಗುಡ್ಡೆಕೊಪ್ಲ ನಿವಾಸಿ ಸಂದೇಶ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಗಣೇಶ್ ಎಂದು ಗುರುತಿಸಲಾಗಿದ್ದು, ಸುರತ್ಕಲ್ ಜಂಕ್ಷನ್ ಬಳಿ ಇರುವ ಖಾಸಗಿ ಬಾರ್ ಮುಂಭಾಗ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಗೆಳೆಯರಾಗಿರುವ ಇವರ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದ್ದು, ಜಗಳ ತಾರಕಕ್ಕೇರಿ ಮಾರಕಾಯುಧದಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.