ಈ ಫಿಲ್ಡರ್ ಕ್ಯಾಚ್ ಹಿಡಿದ ರೀತಿ ನೋಡಿದರೆ ಶಾಕ್ ಆಗ್ತಿರಾ !

ಮಂಗಳೂರು ಜೂನ್ 2: ವಿಶ್ವಕಪ್ ಕ್ರಿಕೇಟ್ ಫಿವರ್ ಜೋರಾಗಿರುವಂತೆ ಮಂಗಳೂರಿನಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ನಲ್ಲಿ ಹಿಡಿದ ಫಿಲ್ಡರ್ ಒಬ್ಬ ಹಿಡಿದ ಕ್ಯಾಚ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನ ಕದ್ರಿ ಮೈದಾನದಲ್ಲಿ ಕ್ರಿಕೆಟ್ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಪಂದ್ಯದಲ್ಲಿ ಬ್ಯಾಟ್ಸ್ ಮಾನ್ ಹೊಡೆದ ಚೆಂಡು ಬಾನೆತ್ತರಕ್ಕೆ ಸಾಗುತ್ತಿದ್ದಂತೆ ಕ್ಯಾಚ್ ಹಿಡಿಯಲು ಓಡಿದ ಫೀಲ್ಡರ್ ರಘುವೀರ್, ಹಿಂದಕ್ಕೆ ಓಡುತ್ತಾ ರಸ್ತೆ ಬದಿಯ ಗೋಡೆಗೆ ಬಡಿದು ಪಲ್ಟಿ ಹೊಡೆದು ಬಿದ್ದಿದ್ದಾನೆ.

ಈ ಕ್ರಿಕೆಟ್ ಪಂದ್ಯಾಟ ಸ್ಥಳೀಯ ವಾಹಿನಿಯಲ್ಲಿ  ನೇರ ಪ್ರಸಾರ ಮಾಡುತ್ತಿರುವುದರಿಂದ ಯುವಕ ಪಲ್ಟಿ ಹೊಡೆಯುವುದು ಲೈವ್ ಆಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕ ಮಾತ್ರ ಏನೂ ಆಗದಂತೆ ಪಲ್ಟಿ ಹೊಡೆದು ಬಿದ್ದರೂ, ಮತ್ತೆ ಫೀಲ್ಡಿಂಗಿನತ್ತ ಹಿಂದಿರುಗಿದ್ದು, ಆತನ ಗೇಮ್ ಸ್ಪಿರಿಟ್ ಗೆ ಮೆಚ್ಚಲೇ ಬೇಕು

VIDEO

Facebook Comments

comments