Connect with us

MANGALORE

ಸುಸೈಡ್ ಪಾಯಿಂಟ್ ಉಳ್ಳಾಲ ನೇತ್ರಾವತಿ ಸೇತುವೆಗೆ ತಡೆಬೇಲಿ

ಮಂಗಳೂರು ಜುಲೈ 6: ಮಂಗಳೂರಿನಲ್ಲಿ ಸುಸೈಡ್‌ ಪಾಯಿಂಟ್ ಎಂದೇ ಗುರುತಿಸಲ್ಪಟ್ಟಿರುವ ಇತ್ತೀಚೆಗೆ ಅತಿ ಹೆಚ್ಚು ಆತ್ಮಹತ್ಯೆಗೆ ಕಾರಣವಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿಗೆ ಸೇತುವೆಗೆ ಕೊನೆಗೂ ತಡೆಬೇಲಿ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ.

ಸುಮಾರು 800 ಮೀಟರ್‌ ಉದ್ದದ ಈ ಸೇತುವೆಯಲ್ಲಿ ಒಟ್ಟು 4 ತಡೆಗೋಡೆಗಳು ಬರುತ್ತಿದ್ದು, ಇದರಿಂದ ಒಟ್ಟು 3,200 ಮೀಟರ್ ಉದ್ದದ ತಡೆಬೇಲಿ ನಿರ್ಮಾಣವಾಗಲಿದೆ. ಸುಮಾರು 55 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಬೇಲಿ ನಿರ್ಮಾಣವಾಗಲಿದ್ದು, ಸೇತುವೆ ಆರಂಭದ ಎರಡೂ ದಿಕ್ಕಿನಲ್ಲಿ ಒಟ್ಟು 4 ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಸುಮಾರು ಎರಡು ತಿಂಗಳ ಕಾಲ ಕಾಮಗಾರಿ ನಡೆಯಲಿದೆ ಎಂದು ಮೂಡಾ ಎಂಜಿನಿಯರ್‌ ಅಕ್ಬರ್‌ ಬಾಷಾ ಹೇಳಿದ್ದಾರೆ.


ಸೇತುವೆ ತಡೆಗೋಡೆ ಒಟ್ಟು 2.5 ಅಡಿ ಎತ್ತರವಿದ್ದು, ಇದರ ಮೇಲೆ 3 ಅಡಿ ಕಬ್ಬಿಣದ ತಡೆಬೇಲಿ ನಿರ್ಮಣವಾಗಲಿದೆ. ಒಂದೊಂದು ಬ್ಲಾಕ್‌ಗಳು ಸುಮಾರು 12 ಅಡಿ ಉದ್ದವಿದ್ದು, ಇದರ ಜೋಡಣೆ ಕಾರ್ಯ ಸೇತುವೆ ಮೇಲ್ಭಾಗದಲ್ಲಿ ನಡೆಯಲಿದೆ. ಈ ಬ್ಲಾಕ್‌ಗಳ ಮೇಲ್ಭಾಗಕ್ಕೆ 1.5 ಅಡಿ ಎತ್ತರದಲ್ಲಿ ಮುಳ್ಳಿನ ಸರಿಗೆ ಎಳೆಯಲು ಯೋಜನೆ ರೂಪಿಸಲಾಗಿದೆ. ಇದರಿಂದ ಈಗ ಇರುವ ತಡೆಗೋಡೆ ಮೇಲೆ 4.5 ಅಡಿ ಎತ್ತರದ ತಡಬೇಲಿ ನಿರ್ಮಾಣವಾಗಲಿದೆ.

Facebook Comments

comments