Connect with us

    DAKSHINA KANNADA

    ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ

    ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ

    ಮಂಗಳೂರು, ಸೆಪ್ಟಂಬರ್ 19: ಮಂಗಳೂರಿನ‌ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ‌ಗಳಿಸಿದ 7 ಮಂದಿ ಸ್ಕೇಟರ್ ಗಳಾದ ಡ್ಯಾಶೀಲ್ ಅಮಂಡಾ ಕಾನ್ಸೆಸ್ಸೋ, ಮೋಕ್ಷಾ ಸುವರ್ಣ, ದೀಯಾ ದಾಸ್, ಶಾಮಿಲ್ ಅರ್ಷದ್, ಖುಷಿ ರಾಣಿ, ಅರ್ಪಿತಾ ಶೇಟ್, ತನ್ಮಯ್ ಕೊಟ್ಟಾರಿ ಇವರಿಗೆ ತಲಾ 4 ಗ್ರಾಂ ಚಿನ್ನದ ನಾಣ್ಯವನ್ನು‌ನೀಡಿ ಅಭಿನಂದಿಸಲಾಯಿತು. ಜೊತೆಗೆ ರಾಷ್ಟ್ರೀಯ ಮಟ್ಟಕ್ಕೆ ತಲುಪಿದ 9 ಮಂದಿ ಸ್ಕೇಟರ್ ಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

    ಕಾರ್ಯಕ್ರಮದಲ್ಲಿ‌ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು,ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್, ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಅಧ್ಯಕ್ಷ ಜಯರಾಜ್, ತರಬೇತುದಾರರಾದ ಮೋಹನ್ ದಾಸ್,ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯ ಮಾಲಕರಾದ ಫ್ರಾನ್ಸಿಸ್ ಕಾನ್ಸೆಸ್ಸೋ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.

    ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು.ಕಬ್ಲ್ ನ ಸದಸ್ಯರಾದ ನಸಿಯಾ ಶಾ ವರದಿ‌ ಮಂಡಿಸಿದರು. ಸರ್ವತ್ ತೋನ್ಸೆ ವಂದಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply