Connect with us

    LATEST NEWS

    ಫಾಜಿಲ್ ಕೊಲೆಗೆ ಬಳಸಿದ ಕಾರು ಕಾರ್ಕಳದಲ್ಲಿ ಪತ್ತೆ….!!

    ಕಾರ್ಕಳ ಜುಲೈ 31: ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಳಸಿದ್ದಾರೆ ಎನ್ನಲಾದ ಹುಂಡೈ ಇಯೋನ್ ಕಾರು ಕಾರ್ಕಳದ ಇನ್ನಾ ಗ್ರಾಮದ ಕಡಕುಂಜದ ನಿರ್ಜನ ಪ್ರದೇಶದಲ್ಲಿ ಇಂದು ಪತ್ತೆಯಾಗಿದೆ.


    ಪಡುಬಿದ್ರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಂದ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸೈ ಪುರುಪೋತ್ತಮ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರು ಸ್ಪರ್ಶಿಸ ಬಾರದು ಎಂಬ ನಿಟ್ಟಿನಲ್ಲಿ ಪ್ಲಾಸ್ಟಿಕ್ ಹೊದಿಗೆ ಹಾಕಿದ್ದಾರೆ. ಸ್ಥಳೀಯರು ಹೇಳುವಂತೆ ಮೂರು ನಾಲ್ಕು ದಿನಗಳಿಂದ ಈ ಕಾರು ಈ ಭಾಗದಲ್ಲಿ ಅನಾಥ ಸ್ಥಿತಿಯಲ್ಲಿದ್ದು, ನಾವು ಅಷ್ಟಾಗಿ ಗಮನಿಸಿಲ್ಲ. ಇವತ್ತು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಅವರು ಬಂದಾಗ ಕೊಲೆಗೆ ಬಳಸಲಾದ ಕಾರು ಎಂಬುದು ನಮಗೆ ತಿಳಿದಿದೆ ಎಂದರು.


    ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆಯಾಗಿದೆ. ಕಾರಿನ ಹಿಂಬದಿ ಸೀಟಿನಲ್ಲಿ ರಕ್ತದ ಕಲೆಗಳೂ ಪತ್ತೆಯಾಗಿದೆ. ನೀರಿನ ಬಾಟಲಿ, ಚಿಲ್ಲರೆ ಹಣವೂ ಕಾರಿನಲ್ಲಿದ್ದು, ಆರೋಪಿಗಳು ಈ ಕಾರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ಕಣ್ತಪ್ಪಿಸಲು ಆರೋಪಿಗಳು ಟೋಲ್ ಗೇಟ್ ಅನ್ನು ತಪ್ಪಿಸಿದ್ದಾರೆ ಎನ್ನಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply