ಮದುವೆ ಎಂದರೆ ಅದರದ್ದೇ ಆದ ವಿಶೇಷ ಸಂಪ್ರಾದಯಗಳನ್ನು ಇರುತ್ತವೆ. ವಿವಾಹ ಸಂಭ್ರಮ ಎಂದ ಮೇಲೆ ಸಾವಿರಾರು ಜನರು ಭಾಗಿಯಾಗಿ ನವ ಜೋಡಿಗೆ ಶುಭಾ ಹಾರೈಸಿ ಆಶೀರ್ವಾದ ಮಾಡುತ್ತಾರೆ. ಜೊತೆಗೆ ಉಡುಗೊರೆಗಳನ್ನು ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಉಡುಗೊರೆ ನೀಡಿಲ್ಲ ಎಂದರೆ ಮದುವೆಯಲ್ಲಿ ಹಣವನ್ನು (ಮುಯ್ಯಿ) ನೀಡುವುದು ಕೂಡ ಇದೆ. ಈಗೀಗ ಎಲ್ಲಿ ನೋಡಿದರೂ ಹೆಚ್ಚು ಜನ ಫೋನ್ ಪೇ, ಪೇಟಿಎಮ್, ಗೂಗಲ್ ಪೇನಿಂದ ಹಣ ಪಾವತಿ ಮಾಡುತ್ತಿದ್ದಾರೆ. 
ಹೀಗಾಗಿ ಕೇರಳದ ವ್ಯಕ್ತಿ ಒಬ್ಬರು ತನ್ನ ಮಗಳ ಮದುವೆಗೆ ಬಂದವರಿಗೆ ಅನುಕೂಲವಾಗಲಿ ಎಂದು ಪೇಟಿಎಮ್ ಕ್ಯೂಆರ್ ಕೋಡ್ ಅನ್ನು ತಮ್ಮ ಜೇಬ್ಗೆ ಟ್ಯಾಗ್ ಮಾಡಿಕೊಂಡಿದ್ದಾರೆ. ಇದರಿಂದ ಮದುವೆಗೆ ಬಂದವರು ಮುಯ್ಯಿ ಮಾಡಬೇಕು ಎಂದರೆ ಫೋನ್ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದರೆ ಸಾಕು. ಸದ್ಯ ಮದುವೆಯಲ್ಲಿ ಇದೊಂದು ವಿಡಿಯೋ ಹೊಸ ಟ್ರೆಂಡ್ನಂತೆ ಎಲ್ಲೆಡೆ ವೈರಲ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.ಆದಿ ಯೋಗ- ಈ 8 ರಾಶಿಯವರಿಗೆ ಸುವರ್ಣ ಕಾಲ! 
ಇನ್ನು ಮದುವೆಗೆ ಬಂಧ ಜನರಂತೂ ಒಬ್ಬರ ಆದ ಮೇಲೆ ಒಬ್ಬರಂತೆ ಅವರ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದಾರೆ. ಒಬ್ಬರು 1000 ರೂ ಪಾವತಿ ಮಾಡಿ, ಕ್ಯಾಮೆರಾಗೆ ತೋರಿಸಿದ್ದಾರೆ. ಮಗಳ ಮದುವೆಯಲ್ಲಿ ತಂದೆ ಈ ರೀತಿ ಕ್ಯೂಆರ್ ಕೋಡ್ ಟ್ಯಾಗ್ ಮಾಡಿಕೊಂಡಿದ್ದಕ್ಕೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೊಬ್ಬರು ಅಂತೂ ಫುಲ್ ತಮಾಷೆ ಮಾಡಿದ್ದಾರೆ.



