Connect with us

DAKSHINA KANNADA

ಚಪ್ಪಲಿ ಕಚ್ಚಿದ್ದ ನಾಯಿಯನ್ನು ಬೈಕ್​ಗೆ ಕಟ್ಟಿ ಎಳೆದ ತಂದೆ-ಮಗ ಪೊಲೀಸ್ ವಶಕ್ಕೆ

ಮಂಗಳೂರು, ಮೇ 23: ಮನೆಯ ಹೊರಗಿದ್ದ ಚಪ್ಪಲಿಯನ್ನು ಕಚ್ಚಿದ್ದಕ್ಕೆ ನಾಯಿಯನ್ನು ಬೈಕ್​ಗೆ ಕಟ್ಟಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ನಗರದ ಕೊಂಚಾಡಿಯ ವೈದ್ಯರೊಬ್ಬರ ಮನೆಯಲ್ಲಿ ಕೆಲಸಕ್ಕಿರುವ ಕಲಬುರಗಿ ಮೂಲದ ಈರಯ್ಯ ಬಸಯ್ಯ ಈ ಕೃತ್ಯ ಎಸಗಿದ ವ್ಯಕ್ತಿ. ವೈದ್ಯರ ಮನೆಯ ಹೊರಗೆ ಇದ್ದ ಚಪ್ಪಲಿಯನ್ನು ನಾಯಿ ಕಚ್ಚಿದೆ. ಅದಕ್ಕೆ ಈರಯ್ಯ ಅದನ್ನು ಬೈಕ್​ಗೆ ಕಟ್ಟಿ ತನ್ನ ಮಗನ ಸಹಾಯದೊಂದಿಗೆ ಎಳೆದೊಯ್ದಿದ್ದಾನೆ‌. ಇದು ಅಪಾರ್ಟ್​ಮೆಂಟ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸಿಸಿಟಿವಿ ಆಧಾರದ ಮೇಲೆ ಎನಿಮಲ್ ಕೇರ್ ಟ್ರಸ್ಟ್ ಸದಸ್ಯರು ಡಿಸಿಪಿಗೆ ಮಾಹಿತಿ ನೀಡಿದ್ದು, ಕಾವೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾತ್ರಿ ವೇಳೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆತನ ಮೇಲೆ ಪ್ರಾಣಿ ಹಿಂಸೆ ಕಾಯ್ದೆಯಡಿ ಮತ್ತು ಲಾಕ್ ಡೌನ್ ವೇಳೆ ಅವಶ್ಯಕತೆ ಇಲ್ಲದೆ ವಾಹನ ಬಳಸಿರುವ ಹಿನ್ನೆಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿದ್ದಾರೆ.

Video: