ಕೊಲ್ಲೂರಿನಲ್ಲಿ ಗಾನಗಂಧರ್ವ ಜೇಸುದಾಸ್ 79ನೇ ಹುಟ್ಟುಹಬ್ಬ

ಉಡುಪಿ ಜನವರಿ 10: ಪ್ರಸಿದ್ಧ ಗಾಯಕ ಜೇಸುದಾಸ್ ಅವರು ಪ್ರತಿ ವರ್ಷದಂತೆ ಇಂದು ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ತಮ್ಮ 79ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಇಂದು ಗಾನ ಗಂಧರ್ವ ಜೇಸುದಾಸ್ ಅವರ ಜನ್ಮದಿನವಾದ ಹಿನ್ನಲೆಯಲ್ಲಿ ತನ್ನ ಪರಮ ದೇವತೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಆಗಮಿಸಿ ದೇವಿಯ ಸನ್ನಿಧಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಕುಟುಂಬ ಸಮೇತ ಕೊಲ್ಲೂರಿಗೆ ಬಂದಿದ್ದ ಜೇಸುದಾಸ್ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಚಂಡಿಕಾಹೋಮ ನೆರವೆರಿಸಿದರು. ಈ ಸಂದರ್ಭದಲ್ಲಿ ತನ್ನ 79 ನೇ ಹುಟ್ಟು ಹಬ್ಬವನ್ನು ಗರ್ಭಗುಡಿಯ ಸಮ್ಮುಖದಲ್ಲಿ ಕುಳಿತು ಗಾನಸೇವೆ ನಡೆಸುವ ಮೂಲಕ ವಿಶೇಷವಾಗಿ ಆಚರಿಸಿಕೊಂಡರು.

ಜೇಸುದಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಂಡಿಕಾ ಹೋಮ ಮತ್ತು ಪೂಜೆ ನಡೆಯಿತು. ಜೇಸುದಾಸ್ ಅವರ ಹೆಸರಿನಲ್ಲಿ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನೂರಾರು ಅಭಿಮಾನಿಗಳು ಶಿಷ್ಯಂದಿರ ಜೊತೆ ದೇವಿಗೆ ಸಂಗೀತ ಸೇವೆ ಸಲ್ಲಿಸುತ್ತಾರೆ. ನೂರಾರು ಪ್ರಶಸ್ತಿಗಳನ್ನು ಪಡೆದ ಅದ್ವಿತೀಯ ಸಾಧಕ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಸಾದಾ ಸೀದ ಭಕ್ತನಂತೆ ಇರುವ ಜೇಸುದಾಸ್ ನೋಡಲು ಜನ ಮುಗಿ ಬಿದ್ದರು.

ಸದ್ಯ ಅಮೇರಿಕಾದಲ್ಲಿ ನೆಲೆಸಿದ್ದರೂ ಇಂದಿಗೂ ಚಿತ್ರ ರಂಗದ ಬೇಡಿಕೆಯ ಗಾಯಕ. ಅವರ ಹುಟ್ಟು ಹಬ್ಬವನ್ನು ಲಕ್ಷಾಂತರ ಅಭಿಮಾನಿಗಳು ಗೌರವದಿಂದ ಆಚರಿಸುತ್ತಾರೆ. ಕೊಲ್ಲೂರಿನಲ್ಲಿ ಪ್ರತೀ ವರ್ಷ ಹುಟ್ಟು ಹಬ್ಬ ಆಚರಿಸುವಾಗ ಅದೆಷ್ಟೋ ಹೆತ್ತವರು ತಮ್ಮ ಮಕ್ಕಳಿಗೆ ಜೇಸುದಾಸ್ ಕೈಯಿಂದ ಅಕ್ಷರಾಭ್ಯಾಸ ಮಾಡಿಸುತ್ತಾರೆ.

VIDEO

214 Shares

Facebook Comments

comments