LATEST NEWS
ಹಳೆಯಂಗಡಿ – ಒಂದೇ ಕುಟುಂಬ ಮೂವರು ವಿಷ ಸೇವಿಸಿ ಆತ್ಮಹತ್ಯೆ
ಮಂಗಳೂರು: ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್ ಸಮೀಪ ನಡೆದಿದೆ.
ಮೃತರನ್ನು ವಿನೋದ್ ಸಾಲಿಯಾನ್ (40) ರಚನಾ ಸಾಲಿಯನ್ (38) ಮತ್ತು ಅವರ ಪುತ್ರ 8 ವರ್ಷದ ಸಾಧ್ಯ ಸಾಲಿಯನ್ ಎಂದು ಗುರುತಿಸಲಾಗಿದೆ. ಮೃತರು ಮನೆಯಿಂದ 2 ದಿನಗಳಿಂದ ಹೊರಗೆ ಬಾರದಿದ್ದಾಗ ಸ್ಥಳೀಯರು ಕಿಟಕಿಯಲ್ಲಿ ನೋಡಿದಾಗ ಶವಗಳು ಪತ್ತೆಯಾಗಿದೆ.
ಮೂಲತಃ ಹಳೆಯಂಗಡಿಯ ನಿವಾಸಿಯಾದ ವಿನೋದ್ ಸಾಲ್ಯಾನ್ ಕುಟುಂಬ, ಕಳೆದ ಹಲವಾರು ವರ್ಷಗಳಿಂದ ಮುಂಬೈಯಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದು, ಕಳೆದ ಒಂದು ವರ್ಷದ ಹಿಂದೆ ಊರಿಗೆ ಬಂದು ಹಳೆಯಂಗಡಿಯ ಕಲ್ಲಾಪು ರೈಲ್ವೇ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಊರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ
ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಲಾಗಿದೆ. ಆಹಾರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಮನೆಯಲ್ಲಿ ವಿಷದ ಹಾಟಲ್ ಸಿಕ್ಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Facebook Comments
You may like
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
-
ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ..ಆರೋಪಿ ಪತ್ತೆಗೆ ವಿಶೇಷ ತಂಡ
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
-
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಆತ್ಮಹತ್ಯೆ ಶಂಕೆ
You must be logged in to post a comment Login