ಸಾಮಾಜಿಕ ಜಾಲತಾಣದಲ್ಲಿ ಸಕತ್  ವೈರಲ್ ಆಗುತ್ತಿರುವ ಹಿಂದೂ ಯುವತಿ‌ ಹಾಗೂ ಮುಸ್ಲಿಂ ಯುವಕನ ವಿವಾಹ ಆಮಂತ್ರಣ

ಮಂಗಳೂರು ಜನವರಿ 2: ಕಳೆದ ಎರಡು ದಿನಗಳಿಂದ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನನ್ನು ವಧು-ವರ ಎಂದು ಹೆಸರಿಸಲಾಗಿದೆ.

ಚೇಳ್ಯಾರು ಪದವಿನ ಬಿಲ್ಲವ ಸಮಾಜದ ಯುವತಿಯ ವಿವಾಹವು, ತಡಂಬೈಲು ಅಝೀಂಖಾನ್ ಎಂಬವರ ಮಗನೊಂದಿಗೆ ವಿವಾಹ ನಿಶ್ಚಯವಾಗಿದ್ದು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 20 ರಂದು ವಿವಾಹ ನಡೆಯಲಿದೆ ಎಂದು ಬರೆಯಲಾಗಿದೆ.
ಆದರೆ ಅಸಲೀಯತ್ ನಲ್ಲಿ ಇದೊಂದು ನಕಲಿ ಆಮಂತ್ರಣ ಪತ್ರಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ನಿಜವೆಂದೇ ತಿಳಿದ ಕೆಲವು ಮಂದಿ ಈ ಆಮಂತ್ರಣ ಪತ್ರಿಕೆಯನ್ನು ಸಕತ್ ಆಗಿ ವೈರಲ್ ಮಾಡುತ್ತಿದ್ದಾರೆ.

ಲವ್ ಜಿಹಾದ್ ಎನ್ನುವ ವಿಚಾರ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಆಮಂತ್ರಣ ಪತ್ರಿಕೆಯನ್ನು ಹರಡುವ ಮೂಲಕ ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಗೊಂದಲ ಮೂಡಿಸುವ ಷಡ್ಯಂತ್ರ ನಡೆಯುತ್ತಿದೆ.

ಅಲ್ಲದೆ ಯಾವುದೋ ಕುಟುಂಬದ ಮನೆ ಮಂದಿಯ ಹೆಸರನ್ನು ಉದ್ದೇಶಪೂರ್ವಕವಾಗಿ ಕೆಡಿಸುವ ಪ್ರಯತ್ನವೂ ನಡೆಯುತ್ತಿದೆ. ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಈ ರೀತಿಯ ನಕಲಿ ಆಮಂತ್ರಣ ಪತ್ರ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

3 Shares

Facebook Comments

comments