Connect with us

    LATEST NEWS

    ಮಂಗಳೂರಿನಲ್ಲಿ ನಕಲಿ ವೋಟರುಗಳ ದಂಧೆ : ಕಣ್ಮುಚ್ಚಿ ಕುಳಿತ ಚುನಾವಣಾಧಿಕಾರಿಗಳು

    ಮಂಗಳೂರಿನಲ್ಲಿ ನಕಲಿ ವೋಟರುಗಳ ದಂಧೆ : ಕಣ್ಮುಚ್ಚಿ ಕುಳಿತ ಚುನಾವಣಾಧಿಕಾರಿಗಳು

    ಮಂಗಳೂರು, ಎಪ್ರಿಲ್ 08 : ಚುನಾವಣೆ ಹತ್ತಿರ ಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನಕಲಿ ಓಟುಗಳ ದಂಧೆ  ಹೆಡೆ ಎತ್ತಿದೆ.

    ದಕ್ಷಿಣ ಕನ್ನಡದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಕ್ತಿನಗರ ವಾರ್ಡ್ ನಲ್ಲಿ ಒಂದೇ ಡೋರ್ ನಂಬರ್ ನಲ್ಲಿ‌ 69 ಮತಗಳು ಚುನಾವಣಾ ಮತಗಟ್ಟೆಗೆ ಸೇರ್ಪಡೆಯಾಗಿವೆ.

    ಇವು ನಕಲಿ ಓಟುಗಳ ಅಕ್ರಮಕ್ಕೆ ಪುಷ್ಠಿ ನೀಡಿದೆ.

    ಈ ಬಗ್ಗೆ ಬಿಜೆಪಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ನಕಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ.

    ಕೇರಳದಿಂದ ಮಂಗಳೂರು ನಗರಕ್ಕೆ ವಿದ್ಯಾಭ್ಯಾಸಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ಗುರುತಿನ‌ ಚೀಟಿ ನೀಡಲಾಗಿದ್ದು, ಇದು ಅಕ್ರಮಕ್ಕೆ ಸಾಕ್ಷಿಯಾಗಿದೆ.

    ಕೆಲವು ತಿಂಗಳ ಹಿಂದೆಯಷ್ಟೇ ಅಧಿಕಾರಿಗಳಿಗೆ  ಈ ದಂಧೆಯ ಬಗ್ಗೆ ಸಾರ್ವಜನಿಕರು ಸುಳಿವು ನೀಡಿದ್ದರು.

    ಆದರೆ ಸೋಮರಿ ಅಧಿಕಾರಿಗಳು ಮಾತ್ರ ಇನ್ನೂ ಕೂಡ ಗಾಢ ನಿದ್ರೆಯಲ್ಲಿದ್ದು ಎಚ್ಚೆತ್ತುಕೊಂಡಿಲ್ಲ. ಇವತ್ತು ಭಾನುವಾರ ಜಿಲ್ಲೆಯಾದ್ಯಂತ ಸೇರ್ಪಡೆಯಾಗದ ಹೊಸ ಮತದಾರರಿಗೆ ಮಿಂಚಿನ ನೋಂದಣಿ ಎಂಬ ಅಭಿಯಾನ ಹಮ್ಮಿ ಕೊಂಡಿತ್ತು.

    ಇದರಲ್ಲಿ ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ಈಮೂಲಕ ನಕಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

    ಶಕ್ತಿನಗರದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಇರುವ 119- 20 ಡೋರ್ ನಂಬರಿನಲ್ಲಿ 69 ಮತದಾರರಿದ್ದು ಆಕ್ರೋಶ ವ್ಯಕ್ತವಾಗಿದೆ.

    ಹೀಗಾಗಿ ಸ್ಥಳೀಯ ಚುನಾವಣಾಧಿಕಾರಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪ ವ್ಯಕ್ತವಾಗಿದ್ದು ಬಿಜೆಪಿ ಮುಖಂಡರು ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಿದ್ದಾರೆ.

    ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ ಆರ್ ಲೋಬೋ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿಯ ನಕಲಿ ಮತಗಳನ್ನು ಸೃಷ್ಠಿಸಿದ್ದರು ಎಂದು ಆರೋಪಿಸಲಾಗಿದ್ದು,

    ಈ ಭಾರಿಯೂ ಅದೇ ಪ್ರಯತ್ನ ದಲ್ಲಿ ತೊಡಗಿದ್ದಾರೆ.

    ಚುನಾವಣೆಯ ದಿನ‌ ನಕಲಿ ಮತದಾರರನ್ನು ಗುರುತಿಸಿ ಮತಗಟ್ಟೆಗೆ  ಬಾರದಂತೆ ರಸ್ತೆಯಲ್ಲಿಯೇ ತಡೆಹಿಡಿಯುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply