ಉಡುಪಿ ಜನವರಿ 15: ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ತೆರೆದು ಅದರಲ್ಲಿ ಹಣದ ಬೇಡಿಕೆ ಇಡುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಪೊಲೀಸರಿಗೆ ದೂರು ನೀಡಿದರೂ ಮತ್ತೆ ಮತ್ತೆ ಖಾತೆಗಳು ಓಪನ್ ಆಗುತ್ತಿರುವುದು ಜಿಲ್ಲಾಧಿಕಾರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಾಕಾರಿ ಸ್ವರೂಪ ಟಿ.ಕೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ವಾಟ್ಯ್ಸಾಪ್ ಗಳಲ್ಲಿ ನನ್ನ ಫೋಟೋ ಹಾಗೂ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆಗಳನ್ನು ಸೃಜಿಸಿ, ಬೇರೆ ಬೇರೆ ಕಾರಣಗಳನ್ನು ನೀಡಿ ಹಣ ವರ್ಗಾಯಿಸುವಂತೆ ಸಂದೇಶಗಳನ್ನು ರವಾನಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಇದನ್ನೂ ಓದಿ –ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯಶ್ರೀ ಅಜೀರು ಆಯ್ಕೆ – ಉಮೇಶ್ ಮಿಜಾರ್ ಗೆ ಕಲಾಭೂಷಣ ಪ್ರಶಸ್ತಿ
ಈ ಬಗ್ಗೆ ಈಗಾಗಲೇ ಕಾನೂನು ಕ್ರಮಕೈಗೊಳ್ಳುವಂತೆ ಸೆನ್ ಪೊಲೀಸ್ ಠಾಣೆ ಉಡುಪಿಯಲ್ಲಿ ದೂರನ್ನು ದಾಖಲಿಸಲಾಗಿರುತ್ತದೆ. ಅದಾಗ್ಯೂ ಇಂತಹ ಪ್ರಕರಣ ಪುನಾರಾವರ್ತನೆಯಾಗುತ್ತಿರುವುದಂದ ಫೇಸ್ಬುಕ್ ಹಾಗೂ ವಾಟ್ಯ್ಸಾಪ್ ಗಳಲ್ಲಿ ನನ್ನ ಫೋಟೋ ಹಾಗೂ ಹೆಸರನ್ನು ಬಳಸಿ ಹಣ ವರ್ಗಾವಣೆಗೆ ಅಥವಾ ಇನ್ನಿತರೆ ಬೇಡಿಕೆಗಳ ಸಂದೇಶಗಳು ಸ್ವೀಕೃತವಾದಲ್ಲಿ, ಅಂತಹ ಸಂದೇಶಗಳಿಗೆ ಸ್ಪಂದಿಸದೆ, ಸಂದೇಶ ಸ್ವೀಕೃತವಾದ ತಕ್ಷಣ ಸೆನ್ ಪೊಲೀಸ್ ಠಾಣೆಗೆ ದೂರು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮೂಲಕ ತಿಳಿಸಲಾಗಿದೆ.