Connect with us

    LATEST NEWS

    ಎಚ್ಚರ….! ಕರಾವಳಿಯಲ್ಲಿ ಚಿನ್ನಾಭರಣ ಲೂಟಿ ಮಾಡುತ್ತಿರುವ ಫೇಕ್ ಪೊಲೀಸ್

    ಎಚ್ಚರ….! ಕರಾವಳಿಯಲ್ಲಿ ಚಿನ್ನಾಭರಣ ಲೂಟಿ ಮಾಡುತ್ತಿರುವ ಫೇಕ್ ಪೊಲೀಸ್

    ಮಂಗಳೂರು ಡಿಸೆಂಬರ್ 26: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದ್ದು, ನಕಲಿ ಸಿಐಡಿ, ಸಿಬಿಐ ಮತ್ತು ರಕ್ಷಣಾ ಅಧಿಕಾರಿಗಳ ತಂಡವೊಂದು ಸಾರ್ವಜನಿಕರ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿರುವ ಮೂರು ಪ್ರಕರಣ ಮಂಗಳೂರು ಹಾಗೂ ಉಡುಪಿ ನಗರದಲ್ಲಿ ನಡೆದಿದೆ.

    ಉಡುಪಿ ಮಂಗಳೂರಿನ 3 ಕಡೆಗಳಲ್ಲಿ ಈ ನಕಲಿ ಪೊಲೀಸರು ಚಿನ್ನಾಭರಣ ಲೂಟಿ ಮಾಡಿದ್ದು ಸುಮರು 1.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ.

    ಮಂಗಳೂರಿನ ನಗರದ ಕಾರ್‌ಸ್ಟ್ರೀಟ್ ಬಿಇಎಂ ಸ್ಕೂಲ್ ಬಳಿ ಈ ಘಟನೆ ನಡೆದಿದ್ದು ಅಳಕೆ ನಿವಾಸಿ ಭಗವಾನ್ ಅವರ ಸುಮಾರು 70 ಸಾವಿರ ಬೆಲೆ ಬಾಳುವ ಚಿನ್ನವನ್ನು ನಕಲಿ ಪೊಲೀಸರು ಕದ್ದೊಯ್ದಿದ್ದಾರೆ.

    ಬೈಕ್ ನಲ್ಲಿ ಬಂದ ಇಬ್ಬರು ತಾವು ಸಿಐಡಿ ಪೊಲೀಸರು ನಗರದಲ್ಲಿ ಚಿನ್ನಾಭರಣ ದರೋಡೆ ಮಾಡುವ ತಂಡ ಇದ್ದು, ನೀವು ನೀವು ನಿಮ್ಮ ಚಿನ್ನಾಭರಣವನ್ನು ಜೋಪಾನವಾಗಿ ಕಿಸೆಯಲ್ಲಿ ಕಟ್ಟಿಡಿ’ ಎಂದು ಹೇಳಿದ್ದಾರೆ. ಮಾತನ್ನು ನಂಬಿದ ಭಗವಾನ್ ಕೂಡಲೇ ಕನ್ನಡಕ, ಮೊಬೈಲ್, ವಾಚ್, ನಗದು, ಉಂಗುರ, ಚಿನ್ನದ ಸರವನ್ನು ಟವಲ್‌ನಲ್ಲಿ ಕಟ್ಟಲು ಮುಂದಾಗಿದ್ದಾರೆ. ಈ ಸಂದರ್ಭ ಆ ಇಬ್ಬರು ನಾವು ಕಟ್ಟಿಕೊಡುತ್ತೇವೆ ಎಂದು ಹೇಳಿ ತೆಗೆದುಕೊಂಡು ಸ್ವಲ್ಪ ಹೊತ್ತಿನಲ್ಲೇ ಆ ಟವಲ್‌ನ್ನು ಮರಳಿ ನೀಡಿದ್ದಾರೆ. ಇದಾದ ನಂತರ ಇಬ್ಬರು ತಾವು ಬಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

    ಉಡುಪಿಯಲ್ಲಿ ಇದೇ ರೀತಿಯ ಎರಡು ಪ್ರಕರಣ ದಾಖಲಾಗಿದೆ. ಉಡುಪಿಯ ಅಂಬಾಗಿಲು ಜಂಕ್ಷನ್‌ ಬಳಿ ಸಿಬಿಐ ಅಧಿಕಾರಿಗಳು ಇಲ್ಲಿ ಬಹಳ ಗಲಾಟೆ ಆಗಿದೆ. ನಿಮ್ಮನ್ನು ಚೆಕ್ ಮಾಡಬೇಕೆಂದು ಹೇಳಿ ಕಿಸೆಯಲ್ಲಿದ್ದ ಕರವಸ್ತ್ರ ಹೊರತೆಗೆದು ವಾಚ್, 1 ಸಾವಿರ ರೂ. ನಗದು ಮತ್ತು ಕುತ್ತಿಗೆಯಲ್ಲಿದ್ದ ಚೈನನ್ನು ಅದರಲ್ಲಿ ಕಟ್ಟಿ ವಾಪಸ್ ನೀಡಿದ್ದರು. ಸ್ವಲ್ಪ ಮುಂದೆ ಹೋಗಿ ಗಂಟನ್ನು ಬಿಚ್ಚಿ ಪರಿಶೀಲಿಸಿದಾಗ 50 ಸಾವಿರ ರೂ. ಮೌಲ್ಯದ ಚಿನ್ನದ ಚೈನ್ ಕಳವಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್ನೊಂದು ನಗರದ ಸಿಟಿ ಬಸ್‌ಸ್ಟಾಂಡ್ ಸಮೀಪ ಬೆಳಗ್ಗೆ 9:45ಕ್ಕೆ ಬಸ್‌ಗೆ ಕಾಯುತ್ತಿದ್ದ ಕೊಪ್ಪರ ತೋಟ ಮಠದ ಬೆಟ್ಟು ನಿವಾಸಿ ಭಾಸ್ಕರ ಪೂಜಾರಿ(61) ಬಳಿ ನಾನು ರಕ್ಷಣಾ ಅಧಿಕಾರಿ ಎಂದು ಹೇಳಿ 24 ಸಾವಿರೂ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಗರಿಸಿದ್ದಾರೆ.
    ಉಡುಪಿಯಲ್ಲಿ ಕೃತ್ಯ ನಡೆಸಿದ ತಂಡ ಮಂಗಳೂರಿನತ್ತ ತೆರಳಿದ್ದು ಇದರ ಬಗ್ಗೆ ಉಡುಪಿ ಜಿಲ್ಲಾ ಪೊಲೀಸರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಅಲರ್ಟ್ ಆದ ನಗರ ಪೊಲೀಸರು ಠಾಣೆಗಳ ಸಾಗರ ವಾಹನದಲ್ಲಿ ಧ್ವನಿವರ್ಧಕ ಮುಖೇನ ಮಾಹಿತಿ ನೀಡಿದ್ದಾರೆ. ಪೊಲೀಸರು ಧ್ವನಿವರ್ಧಕದಲ್ಲಿ ಮಾಹಿತಿ ನೀಡಿದರೂ ಗ್ಯಾಂಗ್ ಮಾತ್ರ ಕಾರ್‌ಸ್ಟ್ರೀಟ್ ಸಮೀಪ ವ್ಯಕ್ತಿಯೊಬ್ಬರನ್ನು ಲೂಟಿ ಮಾಡಿ ಪರಾರಿಯಾಗಿದೆ. ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.

    VIDEO

    https://youtu.be/n7N34z12z9k

    Share Information
    Advertisement
    Click to comment

    You must be logged in to post a comment Login

    Leave a Reply