Connect with us

LATEST NEWS

ಉಡುಪಿ ಜಿಲ್ಲಾಧಿಕಾರಿ ನಕಲಿ ಫೇಸ್ ಬುಕ್ ಅಕೌಂಟ್…ಪೋನ್ ಪೇ ನಲ್ಲಿ ಹಣ ಕಳುಹಿಸುವಂತೆ ಮೆಸೇಜ್

ಉಡುಪಿ ಎಪ್ರಿಲ್ 11 : ಉಡುಪಿ ಜಿಲ್ಲಾಧಿಕಾರಿಗೂ ನಕಲಿ ಫೇಸ್ ಬುಕ್ ಅಕೌಂಟ್ ಕಾಟ ಶುರವಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮಲಾಲಗದ್ದೆ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಅನ್ನು ಓಪನ್ ಮಾಡಿರುವ ಕಳ್ಳರು ಸ್ನೇಹಿತರಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.


ಇತ್ತೀಚೆಗೆ ಅತಿ ಹೆಚ್ಚಾಗಿ ಸರಕಾರಿ ಅಧಿಕಾರಿಗಳನ್ನೇ ಟಾರ್ಗೇಟ್ ಮಾಡುತ್ತಿರುವ ಸೈಬರ್ ಕಳ್ಳರು, ಸಾಮಾಜಿಕ ಜಾಲತಾಣ ಫೇಸ್ ಬುಕ್ ಅಕೌಂಟ್ ನ್ನು ನಕಲಿ ಮಾಡಿ ಹಣ ಮಾಡುವ ದಂಧೆಗೆ ಇಳಿದಿದ್ದಾರೆ.


ಇದೀಗ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರ ಹೆಸರಿನಲ್ಲಿ ನಕಲಿ ಅಕೌಂಟ್ ತೆಗೆದು ಅದರಿಂದ ಜಿಲ್ಲಾಧಿಕಾರಿಗಳ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಚಾಟಿಂಗ್ ನಡೆಸಿ ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.ಫೋನ್ ಪೇ ಮೂಲಕ ಹಣ ಪಾವತಿಸುವಂತೆ ಬೇಡಿಕೆ ಇಟ್ಟಿದ್ದು, ಬೇರೆ ಮೊಬೈಲ್ ನಂಬರ್ ನೀಡಿ ಈ ನಂಬರ್ ನನ್ನ ಸಂಬಂಧಿಕರಾಗಿದ್ದು ಅದಕ್ಕೆ ಕಳುಹಿಸಿ ಎಂದು ಮನವಿ ಮಾಡಲಾಗಿದೆ.


ಫೇಸ್ ಬುಕ್ ನಕಲಿ ಅಕೌಂಟ್ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ಜಗದೀಶ್ ಅವರು ತಮ್ಮ ಅಧಿಕೃತ ಖಾತೆಯಲ್ಲಿ ನಕಲಿ ಖಾತೆ ಬಗ್ಗೆ ಎಚ್ಚರಿಸಿದ್ದು, ಯಾವುದೇ ರೀತಿ ಹಣ ನೀಡಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.