Connect with us

    LATEST NEWS

    ಮತ್ತೆ ಇನ್ಸ್ಟಾಗ್ರಾಂ ಫೇಸ್ ಬುಕ್ ಡೌನ್ – ಒಂದೇ ವಾರದಲ್ಲಿ ಎರಡನೇ ಸಲ

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಮತ್ತೆ ಡೌನ್ ಆಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ಎರಡು ಗಂಟೆ ಕಾಲ ಫೇಸ್‌ಬುಕ್ ಸೇವೆ ಸ್ಥಗಿತಗೊಂಡಿದ್ದು, ತನ್ನ ಬಳಕೆಗಾರರಲ್ಲಿ ಫೇಸ್‌ಬುಕ್ ಇನ್‌ಕಾರ್ಪೊರೇಷನ್ ಕ್ಷಮೆ ಯಾಚಿಸಿದೆ.


    ಶುಕ್ರವಾರ ತಾಂತ್ರಿಕ ದೋಷದಿಂದಾಗಿ ಸಾಮಾಜಿಕ ಜಾಲತಾಣ ವೇದಿಕೆ ಇನ್‌ಸ್ಟಾಗ್ರಾಂ, ಮೆಸೆಂಜರ್ ಮತ್ತು ವರ್ಕ್‌ಪ್ಲೇಸ್ ಸೇವೆಯಲ್ಲಿ ವ್ಯತ್ಯಯವಾಗಿತ್ತು ಎಂದು ಕಂಪೆನಿ ದೃಢಪಡಿಸಿದೆ. “ಕಳೆದ ಕೆಲ ಗಂಟೆಗಳಲ್ಲಿ ನಮ್ಮ ಉತ್ಪನ್ನ ಲಭ್ಯತೆಯಿಂದ ಯಾರಾದರೂ ವಂಚಿತರಾಗಿದ್ದಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ” ಎಂದು ಕಂಪೆನಿ ಹೇಳಿಕೆ ನೀಡಿದೆ. “ಸಮಸ್ಯೆಯನ್ನು ನಾವು ಬಗೆಹರಿಸಿದ್ದೇವೆ. ಎಲ್ಲವೂ ಇದೀಗ ಸಹಜ ಸ್ಥಿತಿಗೆ ಮರಳಿದೆ” ಎಂದು ಸ್ಪಷ್ಟಪಡಿಸಿದೆ.

    ಶುಕ್ರವಾರ ಸಂಭವಿಸಿದ ದೋಷದಿಂದಾಗಿ ಹಲವರು ಇನ್‌ಸ್ಟಾಗ್ರಾಂ ಫೀಡ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಿರಲಿಲ್ಲ. ಅಂತೆಯೇ ಕೆಲವರು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಿರಲಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply