Connect with us

    KARNATAKA

    ಪ್ರವೀಣ್ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಹಣ ವಸೂಲಿ: ಚಕ್ರವರ್ತಿ ಸೂಲಿಬೆಲೆ ಆರೋಪ

    ಬೆಂಗಳೂರು, ಜುಲೈ 30: ಬಿಜೆಪಿ ಯುವ ಮೋರ್ಚ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಯುವ ಮೋರ್ಚದ ಸದಸ್ಯರು ಜನರಿಂದ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸೂಲಿಬೆಲೆ, ಸ್ಥಳೀಯರು ಸ್ವಂತ ಖಾತೆಯ ವಿವರ ನೀಡಿ ಜನರ ಹಣ ವಸೂಲಿ ಮಾಡುತ್ತಿದ್ದಾರೆ. ಒಬ್ಬ ನಾಯಕ ಈ ರೀತಿ ವಂಚನೆಯ ಸಂದೇಶವನ್ನು ಕಳುಹಿಸಿದ್ದು, ಅದಕ್ಕೆ ಆತ ಸೂಕ್ತವಾದ ಉತ್ತರವನ್ನು ಪಡೆದಿದ್ದಾನೆ. ನೀವು ನಮ್ಮಿಂದ ಹಣವನ್ನು ಸಂಗ್ರಹಿಸುತ್ತೀರಿ ಹಾಗೂ ನಿಮ್ಮ ಮಂತ್ರಿಗಳು ಬಳಿಕ ನಿಮ್ಮಿಂದ ಆ ಹಣವನ್ನು ಲೂಟಿ ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ. ಈ ರೀತಿ ವಂಚಿಸುವುದಕ್ಕೆ ಶಭಾಷ್ ಎಂದು ಸೂಲಿಬೆಲೆ ಟೀಕಿಸಿದ್ದಾರೆ.

    ಈ ಬಗ್ಗೆ ಪತ್ರವೂ ಬರೆದಿರುವ ಸೂಲಿಬೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಭಯೋತ್ಪಾದಕರು ಭೀಕರ ಹತ್ಯೆ ಮಾಡಿರುವುದು ಖಂಡನೀಯ. ನಮ್ಮ ಕಾರ್ಯಕರ್ತನಾದ ಪ್ರವೀಣ್ ಕುಟುಂಬಕ್ಕೆ ಪಕ್ಷವು ಈಗಾಗಲೇ ಮೊದಲ ಹಂತದ ನೆರವು ನೀಡಿದೆ. ಮುಂದೆಯೂ ಸರ್ಕಾರ ಮತ್ತು ಪಕ್ಷ ಅವರ ಜೊತೆಗಿರಲಿದೆ ಎಂದಿದ್ದಾರೆ.

    ನೊಂದ ಕುಟುಂಬಕ್ಕೆ ಅಲ್ಲಲ್ಲಿ ಪಕ್ಷದ ಹೆಸರಿನಲ್ಲಿ ಖಾಸಗಿ ಧನ ಸಂಗ್ರಹ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪಕ್ಷದ ಹೆಸರಿನಲ್ಲಿ ಯಾವುದೇ ರೀತಿಯ ಖಾಸಗಿ ಧನ ಸಂಗ್ರಹ ಮಾಡಬಾರದು ಎಂದು ಸೂಲಿಬೆಲೆ ತಿಳಿಸಿದ್ದು, ವಂಚನೆಗೊಳಗಾಗದಂತೆ ಜನರಿಗೂ ಎಚ್ಚರಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply