Connect with us

    LATEST NEWS

    ಪುತ್ರನಿಗೆ ಕೊರೊನಾ; ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮನೆ ಸೀಲ್ ಡೌನ್

    ಮಂಗಳೂರು ಜೂನ್ 26: ಬೆಂಗಳೂರಿನಲ್ಲಿ ಸುರತ್ಕಲ್ ನ ಮಾಜಿ ಶಾಸಕ ಮೊಯಿದ್ದಿನ್ ಬಾವಾ ಅವರ ಪುತ್ರನಿಗೆ ಕೋವಿಡ್ ಸೊಂಕು ದೃಢಪಟ್ಟ ಹಿನ್ನಲೆ ಮಂಗಳೂರಿನಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.


    ಬೆಂಗಳೂರಿನ ಲ್ಯಾಬ್ ನಲ್ಲಿ ಟೆಸ್ಟ್ ವೇಳೆ ಮಾಜಿ ಶಾಸಕ ಮೊಯಿದ್ದಿನ್ ಬಾವಾ ಪುತ್ರನಿಗೆ ಕೊರೋನಾ ದೃಢಪಟ್ಟಿದ್ದು, ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಯಿದ್ದಿನ್ ಬಾವಾ ಅವರ ಪುತ್ರ ಕೆಲ ದಿನಗಳ ಹಿಂದೆ ಮಂಗಳೂರಿನ ಮನೆಗೆ ಬಂದಿದ್ದ ಎನ್ನಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಮಂಗಳೂರಿನ ಚೊಕ್ಕಬೆಟ್ಟು ಬಳಿಯ ಮೊಯಿದ್ದೀನ್ ಬಾವಾ ಮನೆಯನ್ನು ಸೀಲ್ ಡೌನ್ ಮಾಡಿದೆ. ಈ ನಡುವೆ ಬಾವಾ ಮತ್ತು ಅವರ ಪತ್ನಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply