Connect with us

LATEST NEWS

ತಾನು ಹೇಳಿದ್ದು ಸುಳ್ಳು ಎಂದು ಸೂಲಿಬೆಲೆ ಆತ್ಮಸಾಕ್ಷಿಗೆ ಅರ್ಥವಾಗಿರಬೇಕು – ರಮಾನಾಥ ರೈ

ತಾನು ಹೇಳಿದ್ದು ಸುಳ್ಳು ಎಂದು ಸೂಲಿಬೆಲೆ ಆತ್ಮಸಾಕ್ಷಿಗೆ ಅರ್ಥವಾಗಿರಬೇಕು – ರಮಾನಾಥ ರೈ

ಮಂಗಳೂರು ಅಕ್ಟೋಬರ್ 2: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪ್ರಧಾನಿ ನರೇಂದ್ರ ಮೋದಿ ಪರ ನಿಂತು ಸಾಕಾಗಿರಬೇಕು ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಸಂಸದರ ವಿರುದ್ದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ರಮಾನಾಥ ರೈ ಸೂಲಿಬೆಲೆ ಈ ಹಿಂದೆ ಹೇಳಿದ ಯಾವುದೇ ಮಾತು ಅನುಷ್ಠಾನ ಆಗಿಲ್ಲ. ಕಪ್ಪು ಹಣ ಸೇರಿದಂತೆ ಇತರ ಯೋಜನೆಗಳು ಸುಳ್ಳಾಗಿದೆ. ಸೂಲಿಬೆಲೆ ಹೇಳೋದೆಲ್ಲಾ ಸುಳ್ಳು ಎಂದು ಜನರಿಗೆ ಆಗಿದೆ. ಹೀಗಾಗಿ ತಾನು ಹೇಳಿದ್ದು ಸುಳ್ಳಾಯ್ತು ಎಂದು ಸೂಲಿಬೆಲೆ ಆತ್ಮಸಾಕ್ಷಿಗೆ ಅರ್ಥವಾಗಿರಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ವ್ಯಕ್ತಪಡಿಸಿರಬಹುದು ಎಂದು ತಿಳಿಸಿದ್ದಾರೆ.