ಮೈಸೂರಿನಲ್ಲಿ ಸಿದ್ದರಾಮಯ್ಯ ಎಲ್ಲಿದ್ದಾರೆಂದು ಹುಡುಕುವ ಸ್ಥಿತಿ ಬಂದಿದೆ – ಕೆ.ಎಸ್ ಈಶ್ವರಪ್ಪ

ಮಂಗಳೂರು ನವೆಂಬರ್ 8: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ತಿರುಕನ‌‌ ಕನಸು ಕಾಣುತ್ತಿದ್ದಾರೆ. ಮೈಸೂರಿನಲ್ಲಿ ಅವರ ಬೆಂಬಲಿಗರೆಲ್ಲ ಡಿಕೆಶಿ ಪರ ನಿಂತಿದ್ದಾರೆ. ಹೀಗಾಗಿ ಅಲ್ಲೀಗ ಸಿದ್ದರಾಮಯ್ಯ ಎಲ್ಲಿದ್ದಾರೆಂದು ಹುಡುಕುವಂಥ ಸ್ಥಿತಿ ಬಂದಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಒಂದ್ಕಡೆ ಸಿದ್ದರಾಮಯ್ಯ ತಾನೇ ಸಿಎಂ ಎಂದು ತಿರುಗುತ್ತಿದ್ದರೆ, ಮತ್ತೊಂದ್ಕಡೆ ಡಿಕೆಶಿ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ಮರ್ಯಾದೆ ಇಲ್ಲದೆ ಮೆರವಣಿಗೆ ಮಾಡುತ್ತಿದ್ದಾರೆ. ಜನ ಉಗೀತಿದ್ದರೂ, ಇವರು ಭಂಡತನ ಬಿಟ್ಟಿಲ್ಲ ಎಂದು ಮೂದಲಿಸಿದ್ದಾರೆ.

ಇದೇ ವೇಳೆ, ಅನರ್ಹ ಶಾಸಕರ ಬಗ್ಗೆ ಇಂದು ತೀರ್ಪು ಬರಲಿದ್ದು ಏನು ತೀರ್ಪು ಬರುತ್ತೋ ಅದರಂತೆ ನಡೆದುಕೊಳ್ತೇವೆ. ಶಾಸಕರ ರಾಜಿನಾಮೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾರೆ.