Connect with us

    LATEST NEWS

    ಟ್ವಿಟರ್‌ ನಿಂದ ನೀಲಿ ಪಕ್ಷಿಯನ್ನು ಹಾರಿಸಿ ʼನಾಯಿʼಯನ್ನು ಕರೆತಂದ ಎಲಾನ್‌ ಮಸ್ಕ್.!

    ವಾಷಿಂಗ್ಟನ್:‌ ಟ್ವಿಟರ್‌ ಮತ್ತೊಂದು ಅಪ್ಡೇಟ್‌ ನೊಂದಿಗೆ ಸುದ್ದಿಯಾಗಿದೆ. ಈ ಬಾರಿ ಅದು ಲೋಗೋ ವಿಚಾರವಾಗಿ ಎನ್ನುವುದು ವಿಶೇಷ. ಟ್ವಿಟರ್‌ ಆರಂಭವಾದಾಗಿನಿಂದ ಬಹುತೇಕ ಜನರು ಅದನ್ನು ಗುರುತಿಸುವುದು ಅದರ ಜನಪ್ರಿಯ ನೀಲಿ ಪಕ್ಷಿಯ ಲೋಗೋದಿಂದ.

    ಆದರೆ ಆ ಲೋಗೋವನ್ನೇ ಎಲಾನ್‌ ಮಸ್ಕ್‌ ಬದಲಾಯಿಸಿದ್ದಾರೆ. ಸೋಮವಾರ ತಡರಾತ್ರಿ ಕೆಲ ಬಳಕೆದಾರರಿಗೆ ಟ್ವಿಟರ್‌ ನಲ್ಲಿ ಪಕ್ಷಿಯ ಲೋಗೋದ ಬದಲಾಗಿ ಲಾಗಿನ್‌ ಆಗುವ ವೇಳೆ ನಾಯಿಯೊಂದರ ಲೋಗೋ ಕಾಣಿಸಿದೆ. ಮಂಗಳವಾರ ಬೆಳಗ್ಗೆ ಇದು ಟ್ವಿಟರ್‌ ನ ಹೊಸ ಲೋಗೋ ಎನ್ನುವುದು ಗೊತ್ತಾಗಿದೆ.

    ಕ್ರಿಪ್ಟೋಕರೆನ್ಸಿಯ ಮಿಮ್‌ ಗಾಗಿ ಬಳಕೆ ಆಗುತ್ತಿದ್ದ ಡಾಗಿ ಕಾಯಿನ್‌ ಚಿತ್ರವನ್ನು ಅಂದರೆ ಶಿಬಾ ಇನು ನಾಯಿಯ ಚಿತ್ರವನ್ನೇ ಟ್ವಿಟರ್‌ ನ ಹೊಸ ಲೋಗೋವಾಗಿ ಎಲಾನ್‌ ಮಸ್ಕ್‌ ಬಳಸಿಕೊಂಡಿದ್ದಾರೆ. ಲೋಗೋ ಬದಲಾದ ಕುರಿತ ವಿಚಾರವನ್ನು ಡಾಗಿ ಮಿಮ್ ಮೂಲಕ ಎಲಾನ್‌ ಮಸ್ಕ್‌ ಹಂಚಿಕೊಂಡಿದ್ದಾರೆ.

    ಈ ಹಿಂದೆ ವ್ಯಕ್ತಿಯೊಬ್ಬರು ಲೋಗೋವನ್ನು ಬದಲಾಯಿಸಿ ಎಂದು ಹೇಳಿದ ವಿಚಾರವನ್ನು ಮತ್ತೆ ಹಂಚಿಕೊಂಡಿದ್ದಾರೆ. ಅಂದ ಹಾಗೆ ಟ್ವಿಟರ್‌ ನ ವೆಬ್‌ ವರ್ಷನ್‌ ನಲ್ಲಿ ಮಾತ್ರ ಲೋಗೋ ಬದಲಾಗಿದ್ದು, ಮೊಬೈಲ್‌ ವರ್ಷನ್‌ ನಲ್ಲಿ ನೀಲಿ ಪಕ್ಷಿಯ ಲೋಗೋವೇ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply