Connect with us

LATEST NEWS

ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸಗಾರನಿಂದಲೇ ಕಳ್ಳತನ – ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಖದೀಮ

ಪುತ್ತೂರು ಸೆಪ್ಟೆಂಬರ್ 13:ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೇ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.

ಕಡಬದ ಸಂಗೀತ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು. ಅಂಗಡಿಯಲ್ಲಿ ಕಳೆದ 9 ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಚಂದ್ರ ಎಂಬ ಆರೋಪಿ ಮಾಲೀಕನಿಲ್ಲದ ವೇಳೆ ಕ್ಯಾಶ್ ನಿಂದಲೆ ಹಣ ಎಗರಿಸುತ್ತಿದ್ದ. ಕ್ಯಾಶ್ ನಲ್ಲಿ ಹಣ ಮಿಸ್ ಆಗುತ್ತಿರುವ ಬಗ್ಗೆ ಅನುಮಾನಗೊಂಡ ಮಾಲೀಕ ಅಂಗಡಿಯ ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಚಂದ್ರನ ಕೈಚಳಕ ಸಿಕ್ಕಿ ಬಿದ್ದಿದೆ.


ಆರೋಪಿ ಚಂದ್ರ ಕಳೆದ ಹದಿನೈದು ದಿನಗಳಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಚ್ಚು ಹಣ ಕದ್ದಿರುವ ಶಂಕೆ ವ್ಯಕ್ತವಾಗಿದೆ. ಸಂಗೀತ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕರು ಕಡಬ ಠಾಣೆಗೆ ದೂರು ನೀಡಿದ್ದಾರೆ.


ಲಾಕ್ ಡೌನ್ ನಲ್ಲಿ ಕೆಲಸ ಇಲ್ಲದೆ ಒದ್ದಾಡುತ್ತಿರುವವರ ನಡುವೆ ಮಾಲೀಕನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.

https://youtu.be/Z3ydA_WCR_U

Facebook Comments

comments