Connect with us

DAKSHINA KANNADA

ಮಂಗಳೂರಿನಿಂದ ಕೇರಳಕ್ಕೆ ಸಂಚಾರ ಆರಂಭಿಸಿದ ಮೊದಲ ವಿದ್ಯುತ್ ಚಾಲಿತ ಗೂಡ್ಸ್ ರೈಲು..!   

ಮಂಗಳೂರು : ಕರಾವಳಿಯ ಬಂದರು ನಗರಿ ಮಂಗಳೂರಿನಿಂದ ಕೇರಳಕ್ಕೆ ಮೊದಲ ವಿದ್ಯುತ್ ಚಾಲಿತ ಗೂಡ್ಸ್ ರೈಲು ಪ್ರಯಾಣ ಆರಂಭಿಸಿದೆ. ಈ ಮೂಲಕ  ಕರಾವಳಿ ಕರ್ನಾಟಕದ ಇತಿಹಾಸದಲ್ಲಿ  ಹೊಸ ದಾಖಲೆಯನ್ನು ಬರೆದು  ವಿದ್ಯುತ್ ಚಾಲಿತ ರೈಲು ಮಾರ್ಗದ ಸೇರ್ಪಡೆಗೆ ಮಂಗಳೂರು ಸೇರಿತು.

ಮಂಗಳೂರಿನ ಪಣಂಬೂರು ಗೂಡ್ಸ್ ಯಾರ್ಡನಿಂದ ಮೊದಲ ಬಾರಿಗೆ ಎಲೆಕ್ಟ್ರಿಕ್ ಗೂಡ್ಸ್ ರೈಲು ಕೇರಳದ ಕೋಜಿಕ್ಕೋಡಿಗೆ ಸಂಚಾರ ಆರಂಭಿಸಿದೆ.

ಕರಾವಳಿಯ ಈ ಬಂದರು ವಿದ್ಯುದ್ದೀಕರಣದ ಬಳಿಕ ಮೊದಲ ಬಾರಿಗೆ ಈ ರೈಲು ಸಂಚಾರ ಆರಂಭಿಸಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಪಣಂಬೂರು ಯಾರ್ಡನಿಂದ ಸಂಚಾರ ಆರಂಭಿಸಿದೆ.

ಇನ್ನೂ 21 ವ್ಯಾಗ್ ಗಳನ್ನು ಹೊಂದಿರುವ ಈ ರೈಲು ಮಂಗಳೂರಿನ MCF ಫ್ಯಾಕ್ಟರಿಯಿಂದ 1.820 ಟನ್ ಯೂರಿಯಾವನ್ನು ಕೇರಳದ ಕೋಜಿಕ್ಕೋಡಿಗೆ ಸಾಗಟ ಮಾಡಿದೆ.

ಪಣಂಬೂರ ಗೂಡ್ಸ್ ಯಾರ್ಡನಲ್ಲಿ ವಿದ್ಯದ್ದೀಕರಣ ಕಾರ್ಯ ಇದೇ ಮಾರ್ಚ್ ತಿಂಗಳಲ್ಲಿ ಪೂರ್ಣಗೊಂಡಿದ್ದು ಈ ಯೋಜನೆಗೆ ಸುಮಾರು 8 ಕೋಟಿ ರೂ ವೆಚ್ಚ ಮಾಡಲಾಗಿದೆ.