ನೀತಿ ಸಂಹಿತೆ ಉಲ್ಲಂಘಟನೆ ಚಿಂತಕ ಅಮೀನ್ ಮಟ್ಟು ಮೇಲೆ ಪ್ರಕರಣ ದಾಖಲು

ಉಡುಪಿ ಮಾರ್ಚ್ 20 : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಚಿಂತಕ ದಿನೇಶ್ ಅಮೀನ್ ಮಟ್ಟು ಸಹಿತ ಐವರ ಮೇಲೆ ಚನಾವಣಾ ಆಯೋಗ ಪ್ರಕರಣ ದಾಖಲಿಸಿದೆ.

ಉಡುಪಿಯಲ್ಲಿ ಭಾನುವಾರ ನಡೆದಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿಪರ ಚಿಂತಕರು ತಮ್ಮ ಭಾಷಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಹಾಗೂ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಚುನಾವಣಾ ಆಯೋಗದ ಪ್ಲೈಯಿಂಗ್ ಸ್ಕ್ವಾಡ್ ಪ್ರಕರಣ ದಾಖಲಿಸಿದೆ.

ಚಿಂತಕ ದಿನೇಶ್ ಅಮೀನಮಟ್ಟು ಸಹಿತ ಮಹೇಂದ್ರ ಕುಮಾರ್, ಇಂದೂಧರ ಹೊನ್ನಾಪುರ, ಜಿಎನ್ ನಾಗರಾಜ್ ಮೇಲೆ ಪ್ರಕರಣ ದಾಖಲಿಸಿದ್ದು, ಕಾರ್ಯಕ್ರಮ ಆಯೋಜನೆ ಮಾಡಿದ್ದ ಅಮೃತ್ ಶೆಣೈ ಮೇಲೆ ಪ್ರಕರಣ ದಾಖಲಿಸಿದೆ. ಸೃಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದ್ದ ಅಮೃತ್ ಶೆಣೈ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗಿದೆ.

3 Shares

Facebook Comments

comments