Connect with us

LATEST NEWS

ಕರಾವಳಿಯಲ್ಲಿ ಸಡಗರದ ರಂಜಾನ್ ಆಚರಣೆ

ಕರಾವಳಿಯಲ್ಲಿ ಸಡಗರದ ರಂಜಾನ್ ಆಚರಣೆ

ಮಂಗಳೂರು ಜೂನ್ 5: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರಂಭವಾಗಿದೆ. ಶ್ರದ್ಧಾ ಭಕ್ತಿಯೊಂದಿಗೆ ಮುಸ್ಲಿಮರು ಸಂಭ್ರಮದಿಂದ ‘ಈದ್‌ ಉಲ್‌ ಫಿತರ್ ಆಚರಿಸುತ್ತಿದ್ದಾರೆ. ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಬೆಳ್ಳಂಬೆಳಗ್ಗೆ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಸಾಮೂಹಿಕ‌ ನಮಾಝ್ ಸಲ್ಲಿಸಿದ್ದಾರೆ.

ಮಂಗಳವಾರ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ 30 ದಿನಗಳ ಉಪವಾಸ ವ್ರತಾಚರಣೆಯನ್ನು ನಿಲ್ಲಿಸಿ ಜಿಲ್ಲೆಯಲ್ಲಿ ರಂಜಾನ್ ಹಬ್ಬ ಆಚರಿಸಿದರು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಅಲ್ಲಾಹುವಿಗೆ ದುವಾ ಸಲ್ಲಿಸಿದರು. ಪರಸ್ಪರ ಆಲಂಗಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ಜಿಲ್ಲೆಯಾದ್ಯಂತ ನೂರಾರು ಮಸೀದಿಗಳಲ್ಲೂ ಮುಂಜಾನೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮುಸ್ಲಿಮರು ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಕೂಡಾ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಾಡಿನ ಜನತೆಗೆ ರಂಝಾನ್ ಹಬ್ಬದ ಶುಭ ಕೋರಿದ್ದಾರೆ…ಈ ವೇಳೆ ಮಾಜಿ ಶಾಸಕ ಜೆ ಆರ್ ಲೋಬೋ,ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಕೂಡಾ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾಶಯ ಸಲ್ಲಿಸಿದ್ದಾರೆ.

VIDEO

Facebook Comments

comments