ಕದ್ರಿ ಗೋಪಾಲನಾಥ್ ಅವರ ಮಗನಿಗೆ ಕುವೈತ್ ನಿಂದ ಬರಲು ತುರ್ತು ವಿಸಾ ನೀಡಲು ಕ್ರಮ ವಿದೇಶಾಂಗ ಸಚಿವಾಲಯ

ಮಂಗಳೂರು ಅಕ್ಟೋಬರ್ 11: ಇಂದು ವಿಧಿವಶರಾದ ಸಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಅವರು ಅಂತ್ಯಕ್ರಿಯೆ ಇಂದು ಅಥವಾ ನಾಳೆ ನಡೆಯುವ ಸಾಧ್ಯತೆ ಇದ್ದು, ಅವರ ಇನ್ನೋರ್ವ ಮಗ ವಿದೇಶದಲ್ಲಿದ್ದು ಮಂಗಳೂರಿಗೆ ಶೀಘ್ರ ಕರೆತರಲು ಕದ್ರಿ ಗೋಪಾಲನಾಥ್ ಅವರ ಕುಟುಂಬ ಕೇಂದ್ರ ಸರಕಾರದ ಸಹಾಯ ಕೇಳಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸ್ಸಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಗೋಪಾಲನಾಥ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

69 ವರ್ಷ ಪ್ರಾಯದ ಕದ್ರಿ ಗೋಪಾಲನಾಥ್ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಸಂಗೀತ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ಕದ್ರಿ ಗೋಪಾಲನಾಥರ ಒರ್ವ ಮಗ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿಯಾಗಿದ್ದು, ಇನ್ನೋರ್ವ ಮಗ ಗುರುಪ್ರಸಾದ್ ಕುವೈತ್ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ತಂದೆಯ ಅಂತ್ಯಕ್ರಿಯೆ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ಇದೀಗ ಗುರುಪ್ರಸಾದ್ ಅವರಿಗೆ ತಾಂತ್ರಿಕ ತೊಡಕಾಗಿದೆ. ಗುರುಪ್ರಸಾದ್ ಅವರು ಪಾಸ್ ಪೋರ್ಟನ್ನು ಸ್ಟಾಂಪಿಕ್ ಗೆ ಕಳುಹಿಸಿರುವ ಹಿನ್ನಲೆಯಲ್ಲಿ ಭಾರತಕ್ಕೆ ಬರಬೇಕಾದಲ್ಲಿ ಅವರಿಗೆ ವೀಸಾ ದ ವ್ಯವಸ್ಥೆಯಾಗಬೇಕಿದೆ. ಈ ಸಂಬಂಧ ಅವರು ಕುಟುಂಬಸ್ಥರು ಕೇಂದ್ರ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದು, ಆದಷ್ಟು ಬೇಗ ಗುರುಪ್ರಸಾದ್ ಅವರಿಗೆ ವೀಸಾ ಕೊಡಿಸುವ ಭರವಸೆಯನ್ನು ವಿದೇಶಾಂಗ ಸಚಿವಾಲಯ ನೀಡಿದೆ. ಗುರುಪ್ರಸಾದ್ ಮಂಗಳೂರಿಗೆ ಬಂದ ಬಳಿಕವೇ ಕದ್ರಿ ಗೋಪಾಲನಾಥ್ ಅವರ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆಯಿದೆ.