Connect with us

LATEST NEWS

ಕೊವಿಡ್ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ

ಮಂಗಳೂರು ಅಗಸ್ಟ್ 25: ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಕೊರೊನಾ ಭ್ರಷ್ಟಾಚಾರವನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿ ಡಿವೈಎಫ್ ಐ ಉಳ್ಳಾಲ ವಲಯ ದಿಂದ ದೇರಳಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿ.ವೈ.ಎಫ್.ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಂತಿಯಾಝ್ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಇಷ್ಟು ಭ್ರಷ್ಟಾಚಾರ ಮಾಡಿದೆ ಎಂದಾದರೆ, ಕೊರೋನಾ ಇಲ್ಲದ ಸಂದರ್ಭದಲ್ಲಿ ಎಷ್ಟು ಮಾಡಿರಬಹುದು, ಆಸ್ಪತ್ರೆಗಳಿಗೆ ದಾಖಲಾದವರಲ್ಲಿ ಲಕ್ಷಾಂತರ ಹಣ ಸುಲಿಗೆ ಮಾಡುತ್ತಿದ್ದು, ಸರಕಾರ ಜನಪರವಾಗಿರದೆ ಜನವಿರೋದಿಯಾಗಿದೆ ಎಂದು ಆರೋಪಿಸಿದರು. ಇನ್ನಾದರೂ ಜಿಲ್ಲೆಗೆ ಒಂದು ಸರಕಾರಿ ಮೆಡಿಕಲ್ ಸ್ಥಾಪಿಸಿ, ಬಡವರ ಮಕ್ಕಳನ್ನು ಕೇವಲ 6 ಲಕ್ಷದಲ್ಲಿ ವೈದ್ಯರನ್ನಾಗಿ ಮಾಡಬಹುದು, ಕೊರೋನಾ ವಾರಿಯರ್ಸ್ ಆಗಿ ಕೆಲಸಮಾಡುವವರಿಗೆ ವಿಶೇಷ ಪ್ಯಾಕೇಜನ್ನು ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

Facebook Comments

comments