DAKSHINA KANNADA
ಕಾರ್ಕಳದಲ್ಲಿ ಡ್ರಗ್ಸ್ ಜಿಹಾದ್ ಗ್ಯಾಂಗ್ ರೇಪ್ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡುವಂತೆ ದುರ್ಗಾವಾಹಿನಿ ಒತ್ತಾಯ..!
ಮಂಗಳೂರು :ಕಾರ್ಕಳದಲ್ಲಿ ಡ್ರಗ್ಸ್ ಜಿಹಾದ್ ದೊಂದಿಗೆ ನಡೆದ ಗ್ಯಾಂಗ್ ರೇಪ್ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ದುರ್ಗಾವಾಹಿನಿ ಒತ್ತಾಯಿಸಿದೆ.
ಕಾರ್ಕಳ ನಗರದಲ್ಲಿ ಯುವತಿಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು ಇಡೀ ಸಮಾಜವೇ ತಲೆತಗ್ಗಿಸುವ ಅಮಾನವೀಯ ಘಟನೆ ಇದಾಗಿದೆ. ಇದೊಂದು ಪೂರ್ವಯೋಜಿತ ಷಡ್ಯಂತ್ರವಾಗಿದ್ದು ಹಿಂದೂ ಯುವತಿಯರನ್ನು ಗುರಿಯಾಗಿಟ್ಟುಕೊಂಡು ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡ ಕಾರ್ಯಾಚರಿಸುವ ಬಗ್ಗೆ ಸಂಶಯವ್ಯಕ್ತವಾಗುತ್ತಿದೆ. ಕರಾವಳಿಯಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಕಾರ್ಯನಿರ್ವಸುತ್ತಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹಿಸುತ್ತೇವೆ. ಅಲ್ಲದೆ ಕರಾವಳಿಯಲ್ಲಿ ಅವ್ಯಾಹತವಾಗಿ ನಡೆಯುವ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ತಂಡ ರಚಿಸಿ ಸೂಕ್ತಕ್ರಮಕೈಗೊಳ್ಳಬೇಕು. ಹೆಣ್ಣುಮಕ್ಕಳಿಗೆ ಸೂಕ್ತರಕ್ಷಣೆ ನೀಡುವುದರ ಜೊತೆಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಆಗ್ರಹ ಮತ್ತು ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡ ಇರುವ ಸಂಖ್ಯೆ ಬಲವಾಗಿದ್ದು ಹಾಗಾಗಿ ಹೆತ್ತವರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಲು ವಿನಂತಿಸಲಾಗಿದೆ ಎಂದು ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ರೀಮತಿ ಶ್ವೇತಾ ಪ್ರಕಟಣೆಯಲ್ಲಿ ತಿಳಿಸಸಿದರು.
You must be logged in to post a comment Login