ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ- ಮದ್ಯ ಮಾರಾಟ ನಿಷೇಧ

ಮಂಗಳೂರು ನವೆಂಬರ್ 07 : ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 12ರಂದು ಮತದಾನ ಹಾಗೂ ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.

ದ.ಕ ಜಿಲ್ಲೆಯ ಮಂಗಳೂರು ನಗರದಲ್ಲಿ ಮತದಾನವು ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ನಡೆಯುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ಮಂಗಳೂರು ನಗರದಾದ್ಯಂತ ಮತದಾನದ ಸಲುವಾಗಿ ನವೆಂಬರ್ 10ರಂದು ಸಂಜೆ 5 ಗಂಟೆಯಿಂದ ನವೆಂಬರ್ 12 ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆಯ ಸಲುವಾಗಿ ನವೆಂಬರ್ 13 ರ ಸಂಜೆ 5 ಗಂಟೆಯಿಂದ ನವೆಂಬರ್ 14 ರಂದು ಮಧ್ಯರಾತ್ರಿಯವರೆಗೆ ಮತಎಣಿಕೆ ನಡೆಯುವ ಪ್ರದೇಶದ 5 ಕಿಲೋಮೀಟರ್ ವ್ಯಾಪ್ತಿಯನ್ನು ಮದ್ಯ ಮುಕ್ತ ದಿನವೆಂದು (ಡ್ರೈ ಡೇಸ್) ಘೋಷಿಸಿ ಈ ದಿನಗಳಲ್ಲಿ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರಾವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರ ಹಾಗೂ ನಗರದಾದ್ಯಂತ ಯಾವುದೇ ಹೋಟೆಲ್‍ಗಳಲ್ಲಾಗಲಿ, ನಾನ್ ಪ್ರೊಪ್ರೈಟರಿ ಕ್ಲಬ್, ಸ್ಟಾರ್ ಹೋಟೆಲ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಧಿಕಾರಿ ಸಿಂಧು ಬಿ ರೂಪೇಶ್ ಆದೇಶಿಸಿರುತ್ತಾರೆ.