ಬೆಂಗಳೂರು ನವೆಂಬರ್ 10: ರಕ್ಷಿತಾ ಶೆಟ್ಟಿ ವಿರುದ್ದ ಅಶ್ವಿನಿ ಗೌಡ ಮತ್ತು ಜಾಹ್ನವಿ ಬಳಿಕ ಇದೀಗ ಧ್ರುವಂತ್ ತಿರುಗಿ ಬಿದ್ದಿದ್ದಾನೆ. ಮಂಗಳೂರಿನವರೂ ಯಾರೂ ಕೂಡ ಗೈಯ್ಸ್ ನಿಮಗೆ ಗೊತ್ತುಂಟಾ ಅಂತ ಮಾತನಾಡುವುದಿಲ್ಲ ಅವರು ನಾಟಕವಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ.


ಬಿಗ್ ಬಾಸ್ ಸೀಸನ್ 12 ರ ಪ್ರೋಮೋ ದಲ್ಲಿ ದ್ರುವಂತ ರಕ್ಷಿತಾ ವಿರುದ್ದ ಆರೋಪಗಳನ್ನು ಮಾಡಿದ್ದು, ಆಕೆ ಮಾತನಾಡುವ ವಿಚಾರದಲ್ಲಿ ನಾಟಕವಾಡುತ್ತಿದ್ದಾಳೆ. ಗಲಾಟೆ ವೇಳೆ ಸರಿಯಾಗೇ ಕನ್ನಡ ಮಾತನಾಡುತ್ತಾಳೆ. ಆದರೆ ವಿಕೇಂಡ್ ನಲ್ಲಿ ಮಾತ್ರ ನಾಟಕವಾಡುತ್ತಾಳೆ ಎಂದು ಆರೋಪಿಸಿದ್ದಾನೆ.

ಧ್ರುವಂತ್ ಅವರು ಕಳೆದ ವಾರ ರಕ್ಷಿತಾ ಶೆಟ್ಟಿ ಭಾಷೆ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಸುದೀಪ್ ಅವರು ರಕ್ಷಿತಾನ ಬೆಂಬಲಿಸಿದ್ದರು. ‘ಈ ಭಾಷೆ ನಮಗೆ ಓಕೆ’ ಎಂದಿದ್ದರು ಸುದೀಪ್. ಇದನ್ನು ಧ್ರುವಂತ್ ಅವರು ಕಿವಿಮೇಲೆ ಹಾಕಿಕೊಂಡಂತೆ ಇಲ್ಲ. ಈ ವಾರ ನಾಮಿನೇಟ್ ಮಾಡುವಾಗ ಮತ್ತೆ ಅದೇ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಿದ್ದಾರೆ.

Share Information