LATEST NEWS
ಮಂಗಳೂರು ಮತ್ತೊಬ್ಬ ಡ್ರಗ್ ಪೆಡ್ಲರ್ ಅರೆಸ್ಟ್
ಮಂಗಳೂರು ಸೆಪ್ಟೆಂಬರ್ 27: ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನದ ನಂತರ ಡ್ರಗ್ ಪ್ರಕರಣದ ಬೆನ್ನತ್ತಿರುವ ಪೊಲೀಸರು ಇಂದು ಮತ್ತೊಬ್ಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ಬಂಧಿತನನ್ನು ಸೂರಿಂಜೆ ನಿವಾಸಿ ಮೊಹಮ್ಮದ್ ಶಾಕಿರ್ ಎಂದು ಗುರುತಿಸಲಾಗಿದೆ.
ಡ್ರಗ್ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಕಿಶೋರ್ ಶೆಟ್ಟಿ ಮತ್ತು ಆಕಿಲ್ ನೌಶೀನ್ ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಡ್ರಗ್ಸ್ ಲಿಂಕ್ ಗಳನ್ನು ಈ ಮೊಹಮ್ಮದ್ ಶಾಕೀರ್ ಕೊಡಿಸಿದ್ದ ಎನ್ನಲಾಗಿದೆ. ಮಹಮ್ಮದ್ ಶಾಕೀರ್ ಗೆ ಸಂಬಂಧಿಸಿ ಇನ್ನಷ್ಟು ಜನರ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ಕಿಶೋರ್ ಅಮನ್ ಮತ್ತು ತರುಣ್ ಜೊತೆ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ಕಿರುತೆರೆ ನಿರೂಪಕಿ- ನಟಿ ಅನುಶ್ರೀಯನ್ನು ಶನಿವಾರ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.
Facebook Comments
You may like
-
ಸಂದರ್ಶನದಲ್ಲಿ ಮಹಿಳಾ ಅಧಿಕಾರಿಗೆ ಖಾಸಗಿ ಅಂಗ ಪ್ರದರ್ಶಿಸಿದ ಐಟಿ ಉದ್ಯೋಗಾಕಾಂಕ್ಷಿ..!
-
ಜನವರಿ 30ರ ನಂತರ ಕಂಬಳ ಪ್ರಾರಂಭ – ಸಂಸದ ನಳಿನ್ ಕುಮಾರ್ ಕಟೀಲ್
-
ಕುಂದಾಪುರದಲ್ಲಿ ಬೈಕ್ ಕಳ್ಳರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ…!
-
ಸೆಕ್ಯುರಿಟಿಗಾರ್ಡ್ 6ನೇ ಮಹಡಿಯಿಂದ ಬಿದ್ದು ಮೃತ್ಯು
-
ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು
-
ಕಡಬ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದು ಬಲಿ..
You must be logged in to post a comment Login