ದೊಡ್ಡಬಳ್ಳಾಪುರ ಜನವರಿ 30: ವಿಮಾನ ಮಾದರಿಯ ಡ್ರೋನ್ ಒಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದ ಪಾಲನಜೋಗಹಳ್ಳಿಯಲ್ಲಿ ಪತ್ತೆ ಆಗಿದೆ. ಖಾಲಿ ಜಮೀನಿನಲ್ಲಿ‌‌ ಬಿದ್ದಿದ್ದ ಡ್ರೋನ್​ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿದೆ. ಸದ್ಯ ಡ್ರೋನ್​ ಪರಿಶೀಲನೆ ಮಾಡಿದ ಪೊಲೀಸ್​ ಅಧಿಕಾರಿಗಳು, ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ.​​​​​

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಡ್ರೋನ್ ವಶಕ್ಕೆ ಪಡೆದಿದ್ದಾರೆ. ತಜ್ಞರಿಂದ ಪರಿಶೀಲನೆ ನಡೆಸಲಾಗಿದ್ದು, ಥರ್ಮಕೋಲ್ ಬಳಿಸಿ ವಿಮಾನ ಮಾದರಿಯಲ್ಲಿ ರಚಿಸಲಾಗಿರುವ ಡ್ರೋನ್ ಇದಾಗಿದೆ ಎಂದು ಅವರು ತಿಳಿಸಿದ್ದಾರೆ. ಡ್ರೋನ್‌ಗೆ ಬಳಸುವ ರೀತಿಯಲ್ಲಿ ಬ್ಯಾಟರಿಗಳು ಸೇರಿದಂತೆ ಎಲೆಕ್ಟ್ರಿಕ್ ವೈರ್ ಗಳಿಂದ ತುಂಬಿದೆ ಎನ್ನಲಾಗಿದೆ.

ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಚಿಸಿ, ಪರೀಕ್ಷಾರ್ಥವಾಗಿ ಹಾರಿಸಿದ ವೇಳೆ, ಸಂಪರ್ಕ ಕಡಿತಗೊಂಡು ಬಿದ್ದಿರಬಹುದು ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ.

Share Information