ಮಹಿಳೆ ಹಾಗೂ ಮಗುವಿನ ಮೇಲೆ ಹರಿದ ಚಾಲಕ ರಹಿತ ಜೀಪು

ಪುತ್ತೂರು ಫೆಬ್ರವರಿ 10: ಚಾಲಕ ರಹಿತ ಜೀಪೊಂದು ಮಹಿಳೆ ಹಾಗೂ ಮಗುವಿನ ಮೇಲೆ ಹರಿದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ನಡೆದಿದೆ.

ಉಪ್ಪಿನಂಗಡಿ ಯ ಹೋಟೆಲ್ ಒಂದಕ್ಕೆ ಕಟ್ಟಿಗೆ ತುಂಬಿಕೊಂಡು ಬಂದಿದ್ದ ಜೀಪ್ ನಿಂದ ಕಟ್ಟಿಗೆಯನ್ನು ಅನ್ ಲೋಡ್ ಮಾಡುವ ಸಂದರ್ಭದಲ್ಲಿ ಜೀಪ್ ತನ್ನಷ್ಟಕ್ಕೆ ಚಲಿಸಿದ್ದು, ಜೀಪ್ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ತಾಯಿ, ಮಗುವಿನ ಮೇಲೆ ಹರಿದಿದೆ.

ಅದೃಷ್ಟವಶಾತ್ ಮಹಿಳೆ ಹಾಗೂ ಮಗು ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ದಾರೆ. ಅಲ್ಲದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಗಳಿಗೂ ಈ ಜೀಪ್ ಹಾನಿ ಮಾಡಿದೆ‌. ಜೀಪನ್ನು ಚಾಲಕ ಸ್ಟಾರ್ಟ್ ನಲ್ಲೇ ಬಿಟ್ಟು ಹೋಗಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಜೀಪ್ ನ ಅವಾಂತರದ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಅಫಘಾತದ ತೀವೃತೆಯನ್ನು ತಿಳಿಸುತ್ತದೆ.

VIDEO

Facebook Comments

comments